Slide
Slide
Slide
previous arrow
next arrow

ಎಂಬ್ರಾಯ್ಡ್ರಿ ತರಬೇತಿ ಸಂಪನ್ನ

300x250 AD

ಶಿರಸಿ: ಕರಕುಶಲ ನಿಗಮ ಮಂಗಳೂರು, ಜವಳಿ ಸಚಿವಾಲಯ ನವದೆಹಲಿ, ಅರುಣೋದಯ ಟ್ರಸ್ಟ್ (ರಿ) ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿದ್ದ ಎಂಬ್ರಾಯ್ಡರಿ ತರಬೇತಿ ಕಾರ್ಯಕ್ರಮ ಇಂದು ಯಶಸ್ವಿಯಾಗಿ ಸಂಪನ್ನಗೊಂಡಿತು.

ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಿದ ಕರ ಕುಶಲ ನಿಗಮ ಮಂಗಳೂರು ಇದರ ಸಹಾಯಕ ನಿರ್ದೇಶಕರಾದ ಶ್ರೀಮತಿ ವೀಣಾ ಎಸ್. ಮಾತನಾಡಿ ಸರ್ಕಾರದ ಇಂತಹ ಕಾರ್ಯಕ್ರಮಗಳ ಲಾಭ ಪಡೆದು ಸ್ವಾವಲಂಭಿಗಳಾಗಿ ಎಂದರು. ನಮ್ಮ ಇಲಾಖೆಯಿಂದ ಕರಕುಶಲ ಕರ್ಮಿಗಳಿಗೆ ಉತ್ತಮ ತರಬೇತಿ ಹಾಗೂ ಟೂಲ್ ಕಿಟ್ ವಿತರಣೆ ಮುಂತಾದ ಕಾರ್ಯಕ್ರಮಗಳ ಮೂಲಕ ಕರಕುಶಲ ಕರ್ಮಿಗಳ ಬದುಕಲ್ಲಿ ಬದಲಾವಣೆ ತರಲು ಪ್ರಯತ್ನಿಸುತ್ತಿದೆ ಎಂದರು.

300x250 AD

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿರಸಿ ನಗರಸಭೆ ಸದಸ್ಯೆ ಶ್ರೀಮತಿ ದೀಪಾ ಮಹಾಲಿಂಗಣ್ಣನವರ ಮಾತನಾಡಿ ಮಹಿಳೆಯರಿಗೆ ಎಂಬ್ರಾಯ್ಡರಿ ಕಲೆ ಕರಗತ ಮಾಡಲು ವಿಪುಲ ಅವಕಾಶವಿದೆ. ಈ ತರಬೇತಿಯ ಲಾಭ ಪಡೆದು ಸ್ವ ಉದ್ಯೋಗಿಗಳಾಗಿ ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಅರುಣೋದಯ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಡಾ. ಕೃಪಾ ನಾಯ್ಕ ಮಾತನಾಡಿ ಮಹಿಳೆಯ ಸಬಲೀಕರಣದ ವಿಷಯದಲ್ಲಿ ನಮ್ಮ ಅರುಣೋದಯ ಸಂಸ್ಥೆ ಹೆಚ್ಚಿನ ಕಾರ್ಯಮಾಡುತ್ತಿದ್ದು ಇಂದು ತರಬೇತಿ ಪಡೆದ ಎಲ್ಲರೂ ಇದನ್ನು ಸ್ವ ಉದ್ಯೋಗ ಮಾಡಿಕೊಂಡು ಸಬಲರಾಗಿ ಎಂದರು.
ವಿಶೇಷ ತರಬೇತಿದಾರರಾದ ಕುಮಾರಿ ಜಯಲಕ್ಷ್ಮಿ ಮಾತನಾಡಿ ಅತ್ತ್ಯುತ್ತಮವಾಗಿ ಮತ್ತು ಪರಿಣಾಮಕಾರಿಯಾಗಿ ತರಬೇತಿ ಆಯೋಜಿಸಲು ಒಳ್ಳೆಯ ವಾತಾವರಣ ಅರುಣೋದಯ ಸಂಸ್ಥೆಯಲ್ಲಿದೆ. ತರಬೇತಿಗೆ ಈ ಸುಂದರ ವಾತಾವರಣದಲ್ಲಿ ತರಬೇತಿ ನೀಡಲು ತುಂಬಾ ಖು಼ಷಿಯಾಗಿದೆ ಎಂದು ಹೇಳಿದರು.
ತರಬೇತಿದಾರರಾದ ಶ್ರೀಮತಿ ಜ್ಯೋತಿ ನಾಯ್ಕ, ಅರುಣೋದಯ ಸಂಸ್ಥೆಯ ಸಂಚಾಲಕಿ ಶ್ರೀಮತಿ ಸವಿತಾ ಮುಂಡುರು ಉಪಸ್ಥಿತರಿದ್ದರು. ಚಂದ್ರಕಾAತ ಪವಾರ ಸ್ವಾಗತಿಸಿದರು. ಸುಭಾಶ ಮುಂಡುರು ಕಾರ್ಯಕ್ರಮ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top