ಕಾರವಾರ: ಕೇಂದ್ರೀಯ ಕೈಗಾರಿಗೆ ಸುರಕ್ಷಾ ಪಡೆ (ಸಿಐಎಸ್ಎಫ್) ಸಂಸ್ಥಾಪನಾ ದಿನದ ಅಂಗವಾಗಿ, ದೇಶದ ಎಲ್ಲಾ ಕರಾವಳಿ ಪ್ರದೇಶಗಳಲ್ಲಿ ಸಂಚರಿಸಲಿರುವ ಸೈಕ್ಲೋಥಾನ್-2025 (ಸೈಕಲ್ ರ್ಯಾಲಿ) ಸೋಮವಾರ ಸಂಜೆ ಕನಾಟಕ- ಗೋವಾ ಗಡಿ ಭಾಗದ ಜಿಲ್ಲೆಯ ಮಾಜಾಳಿ ಚೆಕ್ಪೋಸ್ಟ್ ಆಗಮಿಸಿದ್ದು, ಈ ಸಂದರ್ಭದಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆವತಿಯಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಮಾಜಾಳಿ ಚೆಕ್ಪೋಸ್ಟ್ ಆಗಮಿಸಿದ ಸೈಕ್ಲೋಥಾನ್ ತಂಡದ ಸದಸ್ಯರನ್ನು ಪುಷ್ಪ ವೃಷ್ಠಿಯ ಮೂಲಕ ಹಾಗೂ ಜಿಲ್ಲೆಯ ಹಮ್ಮೆಯ ಜಾನಪದ ಹಾಲಕ್ಕಿ ಸಮಾಜದ ಸುಗ್ಗಿ ಕುಣಿತದ ಮೆರವಣಿಗೆಯ ಮೂಲಕ ಸ್ವಾಗತಿಸಲಾಯಿತು. ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿಗಳು ಸುಗ್ಗಿ ಕುಣಿತದ ಕಲಾವಿದರೊಂದಿಗೆ ಹೆಜ್ಜೆ ಹಾಕುವ ಮೂಲಕ ಸಂತಸ ವ್ಯಕ್ತಪಡಿಸಿದರು.
ನಂತರ ಸೈಕಲ್ ರ್ಯಾಲಿಯನ್ನು ಮುಂದುವರೆಸಿದ ಸೈಕ್ಲೋಥಾನ್ ತಂಡದ ಸದಸ್ಯರು ಮಾಜಾಳಿ ಬೀಚ್ ನಿಂದ ದೇವಭಾಗ್ ಬೀಚ್ ಮೂಲಕ ಪೊಲೀಸ್ ಕಲ್ಯಾಣ ಮಂಟಪದವರೆಗೆ ಸಾಗಿದರು.
ಈ ಸಂದರ್ಭದಲ್ಲಿ ಹೆಚ್ವವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಡಿವೈಎಸ್ಪಿ ಗಿರೀಶ್, ಸಿಐಎಸ್ಎಫ್ ನ ಹಿರಿಯ ಕಮಾಂಡೆಂಟ್ ಅಜಯ್ ಕುಮಾರ್ ಝಾ, ಡೆಪ್ಯುಟಿ ಕಮಾಂಡೆಂಟ್ ಎಸ್.ಪಿ. ಪಾಟಕ್, ಸಹಾಯಕ ಕಮಾಂಡೆಂಟ್ ದುರ್ಗೆಶ್, ಮನೋಜ್ ಕುಮಾರ್ ಮತ್ತಿತರರು ಇದ್ದರು.
ಈ ಸೈಕ್ಲೋಥಾನ್ ಕಾರ್ಯಕ್ರಮದಲ್ಲಿ ಸಿಐಎಸ್ಎಫ್ ಮಹಿಳಾ ಸಿಬ್ಬಂದಿ ಮತ್ತು ಗೆಜೆಟೆಡ್ ಅಧಿಕಾರಿಗಳು ಸೇರಿದಂತೆ 110 ಸಿಬ್ಬಂದಿಯನ್ನು ಒಳಗೊಂಡ ಸೈಕ್ಲಿಸ್ಟಗಳು ಭಾಗವಹಿಸಿದ್ದು, ಮಾಚ್ ð 25 ರಂದು ಬೆಳಗ್ಗೆ 7 ಗಂಟೆಗೆ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯುವ ಧ್ವಜಾರೋಹಣ ಸಮಾರಂಭದಲ್ಲಿ , ಸಾಂಸ್ಕೃತಿಕ ಕಾರ್ಯಕ್ರಮ (ಯಕ್ಷಗಾನ ಮತ್ತು ಸುಗ್ಗಿ ನೃತ್ಯ) ಮತ್ತು ಸಿಐಎಸ್ಎಫ್ ಪ್ರಾತ್ಯಕ್ಷಿಕೆ (ಅಗ್ನಿಶಾಮಕ, ಶ್ವಾನ ಪಡೆ, ವಿಶೇಷ ಕಾರ್ಯಪಡೆ ಮತ್ತು ಶಸ್ತ್ರಾಸ್ತ್ರ ನಿರ್ವಹಣೆ ) ಪ್ರಾತ್ಯಕ್ಷಿಕೆಯನ್ನು ನೀಡಲಿದ್ದಾರೆ.