ಶಿರಸಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಶಿರಸಿ ತಾಲೂಕಾ ಘಟಕ, ಸಾಹಿತ್ಯ ಸಂಚಲನ(ರಿ) ಶಿರಸಿ ಸಹಯೋಗದಲ್ಲಿ ಏಪ್ರಿಲ್ 1 ರಂದು ನೆಮ್ಮದಿ ಕುಟೀರದಲ್ಲಿ ಇಳಿಹೊತ್ತು 4 ಗಂಟೆಗೆ ಕವಿ ಕೃಷ್ಣ ಪದಕಿ ವಿರಚಿತ ‘ಮುರಮರ್ದನ ಶತಕ’ ಕೃತಿ ಲೋಕಾರ್ಪಣೆಗೊಳ್ಳಲಿದೆ.
ಹಿರಿಯ ಪತ್ರಕರ್ತ ಸಾಹಿತಿ ಅಶೋಕ ಹಾಸ್ಯಗಾರ ಕೃತಿ ಲೋಕಾರ್ಪಣೆ ಮಾಡಲಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಶಿರಸಿ ಘಟಕದ ಅಧ್ಯಕ್ಷರಾದ ಜಿ ಸುಬ್ರಾಯ ಭಟ್ಟ ಬಕ್ಕಳ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಯಲ್ಲಾಪುರ ಕಜಾಪ ಅಧ್ಯಕ್ಷರು ಹಾಗೂ ಸಾಹಿತಿಗಳಾದ ಡಾ.ನವೀನಕುಮಾರ.ಎ.ಜಿ ಕೃತಿ ಪರಿಚಯ ಮಾಡಲಿದ್ದು, ಕಥೆಗಾರ್ತಿ ಪ್ರತಿಭಾ ಎಂ ನಾಯ್ಕ ನಿರೂಪಿಲಿದ್ದಾರೆ.
ಪ್ರಯೋಗಶೀಲ ಕವಿಯಾದ ಕೃಷ್ಣ ಪದಕಿಯವರು ನವ್ಯ ಮತ್ತು ಛಂದೋಬದ್ಧ ಕಾವ್ಯ ರಚನೆಯಲ್ಲಿ ಪ್ರಯತ್ನಿಸುತ್ತಾ ಸುಮಾರು 2000ಕ್ಕೂ ಹೆಚ್ಚು ಮುಕ್ತಕ ಕೃಷಿ ಮಾಡಿದ್ದಷ್ಟೆ ಅಲ್ಲದೇ ಕಥೆ, ಲೇಖನಗಳನ್ನು ಬರೆದಿರುತ್ತಾರೆ. ಶತಕ ಸಾಹಿತ್ಯ, ಖಂಡಕಾವ್ಯಗಳಲ್ಲಿ ಹೊಸತನದ ಪ್ರಯೋಗಗಳಿಂದ ಗಮನ ಸೆಳೆದಿರುತ್ತಾರೆ. ಸಾಹಿತ್ಯದ ಜೊತೆಗೆ ಕರ್ನಾಟಕ ಜಾನಪದ ಪರಿಷತ್ತು ಶಿರಸಿ ಘಟಕದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಸಾಪ ಗೌರವ ಕಾರ್ಯದರ್ಶಿಗಳಾದ ವಾಸುದೇವ ಶಾನಭಾಗ, ಶ್ರೀನಿವಾಸ ನಾಯ್ಕ ಮತ್ತು ಕೋಶಾಧ್ಯಕ್ಷರಾದ ವಿ.ಆರ್.ಹೆಗಡೆ ಮತ್ತಿಘಟ್ಟಾ ಕಸಾಪ ಶಿರಸಿ ಪದಾಧಿಕಾರಿಗಳು ಸದಸ್ಯರು ಹಾಗೂ ಸಾಹಿತ್ಯ ಸಂಚಲನದ ಪದಾಧಿಕಾರಿಗಳು ಸದಸ್ಯರು ಕಾರ್ಯಕ್ರಮಕ್ಕೆ ಸ್ವಾಗತ ಕೋರಿದ್ದಾರೆ.