Slide
Slide
Slide
previous arrow
next arrow

ಅಕ್ರಮ ಗಾಂಜಾ ಮಾರಾಟ: ಓರ್ವನ ಬಂಧನ

300x250 AD

ಶಿರಸಿ: ಅಕ್ರಮ ಗಾಂಜಾ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊರ್ವನನ್ನು ಶಿರಸಿ ನಗರ ಠಾಣೆ ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.

ಶಿರಸಿ ನಗರದ ಮುಸ್ಲಿಂಗಲ್ಲಿಯ ನಿವಾಸಿಯಾದ ಅಜಾಜ್ ಮಕ್ಬೂಲ್ ಅಹ್ಮದ್ ಶೇಖ್ ಈತ ಅಕ್ರಮವಾಗಿ ಗಾಂಜಾ ಸಾಗಾಟ ಮಾಡಿಕೊಂಡು ಬಂದು ಶಿರಸಿ ನಗರದ ಕಲ್ಕುಣಿ ರಸ್ತೆಯ ಕಟ್ಟಿಗೆ ಡಿಪೋ ಹತ್ತಿರ ಮಾರಾಟ ಮಾಡುತ್ತಿದ್ದಾಗ ಶಿರಸಿ ನಗರ ಪೊಲೀಸರು ದಾಳಿ ನಡೆಸಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿತನಿಂದ15000/- ರೂ. ಮೌಲ್ಯದ 154 ಗ್ರಾಂ ಗಾಂಜಾ, ಚಿಲುಮೆ ಹಾಗೂ ಪ್ಲಾಸ್ಟಿಕ್ ಕವರ್ ಗಳು, ಡಿಜಿಟಲ್ ತೂಕದ ಯಂತ್ರ, 1800/- ರೂ ನಗದು ಹಣ, ಕೃತ್ಯಕ್ಕೆ ಬಳಸಲಾದ ಮೊಟಾರ್ ಸೈಕಲ್‌ನ್ನು ಜಪ್ತಿಮಾಡಿದ್ದಾರೆ.
ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಂ. ನಾರಾಯಣ್ ,ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಿ. ಕೃಷ್ಣಮೂರ್ತಿ ಹಾಗೂ
ಶಿರಸಿ ಉಪವಿಭಾಗದ ಡಿಎಸ್ಪಿ ಗಣೇಶ ಕೆ.ಎಲ್‌., ವೃತ್ತ ನಿರೀಕ್ಷಕರಾದ ಶಶಿಕಾಂತ ವರ್ಮಾ ಮಾರ್ಗದರ್ಶನದಲ್ಲಿ ಶಿರಸಿ ನಗರ ಠಾಣೆ ಪಿಎಸ್ಐ ನಾಗಪ್ಪ ಬಿ. ಹಾಗೂ ಸಿಬ್ಬಂದಿಗಳಾದ ನಾರಾಯಣ ರಾಥೋಡ ಎಎಸ್ಐ, ಹನುಮಂತ ಕಬಾಡಿ, ಸತೀಶ್ ಅಂಬಿಗ,ಸದ್ದಾಂ ಹುಸೇನ್‌, ಮಲ್ಲಿಕಾರ್ಜುನ ಕುದರಿ, ಚನ್ನಬಸಪ್ಪ ‌ಕ್ಯಾರಕಟ್ಟಿ, ಶಿವಲಿಂಗ ತುಪ್ಪದ,
ಪ್ರವೀಣ್ ಎನ್, ರಾಜಶೇಖರ ಅಂಗಡಿ, ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

300x250 AD
Share This
300x250 AD
300x250 AD
300x250 AD
Back to top