ದಾಂಡೇಲಿ : ಶಾಸಕರು ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ ಅವರ 78ನೇ ಜನ್ಮ ದಿನಾಚರಣೆಯ ನಿಮಿತ್ತ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಗರದ ಸಾರ್ವಜನಿಕ ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯ ಒಳ ರೋಗಿಗಳಿಗೆ ಭಾನುವಾರ ಹಣ್ಣು ಹಂಪಲನ್ನು ವಿತರಿಸಲಾಯಿತು.
ಆನಂತರ ನಗರದ ಸೋಮಾನಿ ವೃತದ ಹತ್ತಿರ ಕೇಕ್ ಕತ್ತರಿಸಿ ಸಿಹಿಯನ್ನು ಹಂಚಿ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೋಹನ ಹಲವಾಯಿ ಅವರು ನಾಡು ಕಂಡ ಶ್ರೇಷ್ಠ ರಾಜಕಾರಣಿ ಆರ್.ವಿ. ದೇಶಪಾಂಡೆ. ಆರ್.ವಿ. ದೇಶಪಾಂಡೆ ಅವರು ತಮ್ಮ ಸುಧೀರ್ಘ ರಾಜಕಾರಣದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ತಮ್ಮನ್ನು ತಾವು ಅತ್ಯಂತ ಪ್ರಾಮಾಣಿಕವಾಗಿ, ಬದ್ಧತೆಯಿಂದ ತೊಡಗಿಸಿಕೊಂಡಿದ್ದಾರೆ. ದಾಂಡೇಲಿಯ ಸಮಗ್ರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು, ಅನುದಾನಗಳನ್ನು ತಂದಿರುವುದನ್ನು ಯಾರು ಮರೆಯುವಂತಿಲ್ಲ. ಆರೋಗ್ಯ, ಶೈಕ್ಷಣಿಕ ಹಾಗೂ ಪ್ರವಾಸೋದ್ಯಮ ಕ್ಷೇತ್ರಕ್ಕೆ ಆರ್.ವಿ.ದೇಶಪಾಂಡೆ ಅವರು ನೀಡಿದ ಕೊಡುಗೆ ಸದಾ ಸ್ಮರಣೀಯವಾಗಿದೆ ಎಂದರು. ನಾಡಿನ ಮುಖ್ಯಮಂತ್ರಿಯಾಗುವ ಎಲ್ಲಾ ಅನುಭವ ದೇಶಪಾಂಡೆ ಅವರಿಗಿದ್ದು, ಅವರು ಮುಖ್ಯಮಂತ್ರಿ ಆಗಬೇಕೆಂಬುದು ಕ್ಷೇತ್ರದ ಅಸಂಖ್ಯಾತ ಜನತೆಯ ಬಹುದೊಡ್ಡ ಆಸೆಯಾಗಿದೆ. ಕ್ಷೇತ್ರದ ಜನತೆಯ ಕನಸು ಸಾಕಾರಗೊಳ್ಳಲಿ. ಆರ್.ವಿ. ದೇಶಪಾಂಡೆ ಅವರಿಗೆ ಭಗವಂತ ಆಯುರಾರೋಗ್ಯವನ್ನು ದಯಪಾಲಿಸಲೆಂದು ಶುಭವನ್ನು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷರಾದ ಅಷ್ಪಾಕ್ ಶೇಖ, ಉಪಾಧ್ಯಕ್ಷೆ ಶಿಲ್ಪಾ ಕೋಡೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುಧಾ ರಾಮಲಿಂಗ ಜಾಧವ, ತಾಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷರಾದ ರಿಯಾಜ್ ಬಾಬು ಸೈಯದ್, ನಗರ ಸಭಾ ಸದಸ್ಯರುಗಳಾದ ಯಾಸ್ಮಿನ್ ಕಿತ್ತೂರು, ಸರಸ್ವತಿ ರಜಪೂತ, ಅನಿಲ್ ನಾಯ್ಕರ, ಮಹಾದೇವ ಜಮಾದಾರ, ರುಕ್ಮಿಣಿ ಬಾಗಾಡೆ, ವೆಂಕಟ್ರಮಣಮ್ಮ ಮೈಥುಕುರಿ, ರಾಜಶೇಖರ ಐ.ಎಚ್, ಪ್ರಾನ್ಸಿಸ್ ಮಸ್ಕರೇನಸ್, ಕಾಂಗ್ರೆಸ್ ಮುಖಂಡರುಗಳಾದ ಮುನ್ನಾ ವಹಾಬ್, ತಸ್ವರ ಸೌದಾಗರ, ಆರ್.ಪಿ.ನಾಯ್ಕ, ಬಶೀರ ಗಿರಿಯಲ, ದಿವಾಕರ ನಾಯ್ಕ, ಎಂ.ಬಿ ಅಪ್ಪಣ್ಣಗೌಡರ, ಕೀರ್ತಿ ಗಾಂವಕರ, ಅನಿಲ್ ದಂಡಗಲ್, ರಫೀಕ್ ಖಾನ್, ಪ್ರತಾಪ ಸಿಂಗ್ ರಜಪೂತ್, ರವೀಂದ್ರ ಶಾ, ವಿನಾಯಕ ಬಾರಿಕ್ಕೇರ, ಜಾಪರ್ ಮಾಸನಗಟ್ಟಿ, ಅಡಿವೆಪ್ಪ ಭದ್ರಕಾಳಿ, ಸೀಲೆಮಾನ್ ಸೈಪುದ್ದೀನ್ ಶೇಖ, ಅಪ್ರೀನ್ ಕಿತ್ತೂರು, ರಾಜಶೇಖರ ನಿಂಬಾಳ್ಕರ, ಶೇರಖಾನ್ ಇಬ್ರಾಹಿಂ ಲಿಂಬುವಾಲೆ, ರವಿ ಚೌವ್ಹಾಣ್, ಶೌಕತ್ ಆಲಿ, ಸರಸ್ವತಿ ಚೌವ್ಹಾಣ್, ಸುಜಾತಾ, ರೇಷ್ಮಾ ಮಾಲ್ದಾರ್, ರೇಷ್ಮಾ, ಮೇರಿ, ರೇಣುಕಾ ಮಾದಾರ, ರೇಣುಕಾ ಭಜಂತ್ರಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.