ದಾಂಡೇಲಿ : ನಗರದ ಬರ್ಚಿ ರಸ್ತೆಯಲ್ಲಿ ಟ್ರಕ್ಕೊಂದು ಬ್ರೇಕ್ ಫೇಲ್ ಆಗಿ ಎರಡು ದ್ವಿಚಕ್ರ ವಾಹನಗಳಿಗೆ ಹಾನಿಯಾದ ಘಟನೆ ಭಾನುವಾರ ನಡೆದಿದೆ.
ಕನ್ಯಾ ವಿದ್ಯಾಲಯದ ಮುಂಭಾಗದಲ್ಲಿರುವ ಬರ್ಚಿ ರಸ್ತೆಯಲ್ಲಿ ಕೆಎ: 23 ಡಿ: 4458 ಸಂಖ್ಯೆಯ ಟ್ರಕ್ಕೊಂದು ಬ್ರೇಕ್ ಫೇಲ್ ಆಗಿ ಕೆಎ: 65 ಎಚ್: 5757 ಸಂಖ್ಯೆಯ ಸ್ಕೂಟಿ ಮತ್ತು ಕೆಎ:20, ಇಎಫ್: 5972 ಸಂಖ್ಯೆಯ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಎರಡು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ. ಅಲ್ಲೇ ಪಕ್ಕದಲ್ಲಿದ್ದ ಅಪ್ಪು ಇಡ್ಲಿ ಕೆಫೆಯ ಕೌಂಟರಿಗೂ ಹಾನಿಯಾಗಿದೆ. ಅಪ್ಪು ಇಡ್ಲಿಗೆ ಕೆಫೆಯ ಒಬ್ಬರಿಗೆ ಸಣ್ಣ ಪುಟ್ಟ ಗಾಯವಾಗಿದೆ. ಅದೃಷ್ಟವಶಾತ್ ಆಗಬಹುದಾದ ಬಾರಿ ಅನಾಹುತವೊಂದು ತಪ್ಪಿದಂತಾಗಿದೆ.
ಘಟನಾ ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.