ದಾಂಡೇಲಿ : ನಗರದ ಜೆ.ಎನ್.ರಸ್ತೆಯಲ್ಲಿರುವ ಶ್ರೀಹರಿ ಚಿತ್ರಮಂದಿರದ ಹತ್ತಿರ ರಸ್ತೆ ಬದಿಯಲ್ಲಿ ಸಿಕ್ಕ ರೂ. 8,000/- ಹಣವನ್ನು ಪೊಲೀಸರ ಸಮ್ಮುಖದಲ್ಲಿ ಮರಳಿ ವಾರಿಸುದಾರರಿಗೆ ಒಪ್ಪಿಸಿ ಇಬ್ಬರು ಯುವಕರು ಪ್ರಾಮಾಣಿಕತೆ ಮೆರೆದಿದ್ದಾರೆ.
ನಗರದ ನಿವಾಸಿಗಳಾದ ಜಗದೀಶ ತಳವಾರ ಮತ್ತು ಅನಿಲ್ ಕುಮಾರ್ ಶಾನಭಾಗ ಜೆ.ಎನ್.ರಸ್ತೆಯಲ್ಲಿ ಹೋಗುತ್ತಿರುವಾಗ ರಸ್ತೆ ಬದಿಯಲ್ಲಿ ರೂ.8,000/- ಹಣ ಸಿಕ್ಕಿರುತ್ತದೆ. ಸಿಕ್ಕ ಹಣವನ್ನು ತಕ್ಷಣವೇ ನಗರ ಪೊಲೀಸ್ ಠಾಣೆಗೆ ತಂದು, ಪೊಲೀಸರಿಗೆ ವಿಷಯವನ್ನು ತಿಳಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಸಿಕ್ಕ ಹಣ 14ನೇ ಬ್ಲಾಕ್ ನಿವಾಸಿಯಾಗಿರುವ ಚಾಂದ್ ಬಾಷಾ ಸಾಬ್ ಮುಂಡರಗಿ ಅವರದ್ದೆಂದು ತಿಳಿದು ಬಂದಿದೆ. ತಕ್ಷಣವೇ ಅವರನ್ನು ನಗರ ಠಾಣೆಗೆ ಕರೆಸಿ ಪೋಲಿಸರ ಸಮ್ಮುಖದಲ್ಲಿ ಜಗದೀಶ ತಳವಾರ ಮತ್ತು ಅನಿಲ್ ಕುಮಾರ್ ಶಾನಭಾಗ ಅವರ ಮೂಲಕ ಹಣವನ್ನು ಹಸ್ತಾಂತರಿಸಲಾಯಿತು. ಜಗದೀಶ ತಳವಾರ ಮತ್ತು ಅನಿಲ್ ಕುಮಾರ್ ಶಾನಭಾಗ ಅವರ ಪ್ರಾಮಾಣಿಕತೆಯ ಬಗ್ಗೆ ಶ್ಲಾಘನೆ ವ್ಯಕ್ತವಾಗಿದೆ.