ದಾಂಡೇಲಿ : ತಮ್ಮದೇ ಆದ ಆಚರಣೆಯ ಮೂಲಕ ನಾಡಿನ ಸಾಂಸ್ಕೃತಿಕ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡುತ್ತಾ ಬಂದಿರುವ ಧನಗರ ಗೌಳಿ ಸಮುದಾಯದ ವಿಶಿಷ್ಟ ಆಚರಣೆಗಳಲ್ಲಿ ಹೋಳಿ ಹಬ್ಬವು ಪ್ರಮುಖವಾಗಿದೆ.
ಹೋಳಿ ಹಬ್ಬದ ನಿಮಿತ್ತ ಗೌಳಿ ನೃತ್ಯ ಇದೀಗ ದಾಂಡೇಲಿ ನಗರದಲ್ಲಿ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಧನಗರ ಗೌಳಿ ಸಮುದಾಯದ ನೃತ್ಯ ತಂಡ ನಗರದೆಲ್ಲದೆ ಸಂಚರಿಸಿ ನೃತ್ಯವನ್ನು ಪ್ರದರ್ಶಿಸಿ, ಹೋಳಿ ಹಬ್ಬದ ಸಂಭ್ರಮವನ್ನು ನಗರದ ಜನತೆಗೆ ಉಣಬಡಿಸುತ್ತಿದ್ದಾರೆ.