ಹೊನ್ನಾವರ : ಪಟ್ಟಣದ ರಾಮತೀರ್ಥ ರಾಮೇಶ್ವರ ದೇವಸ್ಥಾನದ ಎದುರಿನ ಸಾರ್ವಜನಿಕ ಅರಣ್ಯ ಪ್ರದೇಶದಲ್ಲಿ ತಮ್ಮ ಅನ್ಯಾಯದ ಲಾಭಕ್ಕೋಸ್ಕರ ಇಸ್ಪೀಟ್ ಜುಗಾರ್ ಆಟ ಆಡುತ್ತಿದ್ದಾಗ ಪೊಲೀಸರ ದಾಳಿಗೆ ಸಿಕ್ಕಿ ಬಿದ್ದಿರುತ್ತಾರೆ.
ಇಸ್ಪೀಟ್ ಆಟದಲ್ಲಿ ತೊಡಗಿದ್ದ ತುಳಸಿನಗರದ ಯಶವಂತ ಪುರುಸಯ್ಯ ಮೇಸ್ತ, ಗಣಪತಿ ಸುರೇಶ ಮೇಸ್ತ, ದಿನೇಶ ಸುರೇಶ ಮೇಸ್ತ, ಪ್ರಕಾಶ ಕೃಷ್ಣಪ್ಪ ಮೇಸ್ತ ಇವರ ಮೇಲೆ ಪ್ರಕರಣ ದಾಖಲಾಗಿದೆ. ದಾಳಿಯ ವೇಳೆ 1050 ನಗದು, ಇನ್ನಿತರ ಸಲಕರಣೆ ಸಿಕ್ಕಿದೆ.