ಶಿರಸಿ: ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಾರೆ ಇದಕ್ಕೆ ನಾವೆಲ್ಲರೂ ಹೆಮ್ಮೆ ಪಡುತ್ತೇವೆ ಎಂದು ಎಂ ಎಂ ಕಾಲೇಜು ಉಪಸಮಿತಿಯ ಅಧ್ಯಕ್ಷ ಎಸ್. ಕೆ. ಭಾಗವತ್ ಹೇಳಿದರು.
ಶಿರಸಿಯ ಎಮ್ಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾ ವಿದ್ಯಾಲಯದ ಎನ್ ಸಿ ಸಿ ವಿಭಾಗದ ಸಹಯೋಗದಲ್ಲಿ, ದೆಹಲಿಯ ಗಣರಾಜ್ಯೋತ್ಸವ ಪೆರೇಡ್ ಹಾಗೂ ಪಿಎಂ ರ್ಯಾಲಿ ಯಲ್ಲಿ ಭಾಗವಹಿಸಿ ಕಾಲೇಜಿಗೆ ಕೀರ್ತಿ ತಂದ ಸಿ.ಕ್ಯೂ.ಎಂ.ಎಸ್ ಅಶ್ವಿನಿ ಹೆಗಡೆ ಹಾಗೂ ಎಸ್.ಯು.ಓ ನಿಖಿಲ್ ವೆರ್ಣೇಕರ್ ಇವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸುವುದು, ಸಂಸ್ಥೆಯ ಕರ್ತವ್ಯ ಅವರ ಸಾಧನೆ ಅನುಭವ ಉಳಿದ ವಿದ್ಯಾರ್ಥಿಗಳಿಗೂ ಸ್ಫೂರ್ತಿಯಾಗಬೇಕು.ನಮ್ಮ ವಿದ್ಯಾರ್ಥಿಗಳು ಹಾಗೂ ಎನ್ ಸಿ ಸಿ ಕೆಡಿಟ್ ಗಳು ಕರ್ನಾಟಕ ಗೋವಾ ಡೈರೆಕ್ಟ್ರೆಟ್ ನಿಂದ ಆರು ವರ್ಷದ ಬಳಿಕ ಚಾಂಪಿಯನ್ ಆಗಿದ್ದು ತುಂಬಾನೇ ಖುಷಿ ತಂದಿದೆ. ನಮ್ಮ ಸಂಸ್ಥೆಯಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಇಂದು ರಾಷ್ಟ್ರಮಟ್ಟದಲ್ಲಿ ಸೇನಾ ಹಾಗೂ ಅನೇಕ ರಂಗದಲ್ಲಿ ಸಾಧನೆ ತೋರಿದ್ದಾರೆ. ಎನ್ ಸಿ ಸಿ ಇಂದ ನಮ್ಮ ಜೀವನದಲ್ಲಿ ಶಿಸ್ತನ್ನು ರೂಪಿಸಿಕೊಳ್ಳುವುದಕ್ಕೆ ಸಾಧ್ಯ.
ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಹೀಗೆ ರಾಷ್ಟ್ರ ಮಟ್ಟದಲ್ಲಿ ಅನೇಕ ಸಾಧನೆಗಳನ್ನು ಮಾಡಿ ನಮ್ಮ ಸಂಸ್ಥೆಯ ಹೆಸರನ್ನು ಉಜ್ವಲ ಮಾಡಬೇಕು ಎಲ್ಲಾ ವಿದ್ಯಾರ್ಥಿಗಳು ಇದರಿಂದ ಪ್ರೇರಣೆಗೊಳ್ಳಬೇಕು. ಮುಂದಿನ ವರ್ಷದಿಂದ ಪ್ರತಿ ವರ್ಷ ಏನ್ ಸಿ ಸಿ ಕ್ಯಾಂಪ್ ನಮ್ಮ ಕಾಲೇಜಿನಲ್ಲೇ ನಡೆಯುವುದು ಇದು ನಮ್ಮ ಸಂಸ್ಥೆಗೆ ಹೆಮ್ಮೆಯ ವಿಷಯ ಹಾಗೂ ಇದರಿಂದ ನಮ್ಮ ಸಂಸ್ಥೆಯುಖ್ಯಾತಿಯನ್ನು ಪಡೆಯುತ್ತದೆ ಎಂದು ಹೇಳಿದರು.
ಕಾಲೇಜಿನ ಮಾಜಿ ಪ್ರಾಚಾರ್ಯ ಹಾಗೂ ಎನ್ ಸಿ ಸಿ ಮಾಜಿ ಏಎನ್ಓ ಆದ ಡಾ. ಟಿ ಎಸ್ ಹಳೆಮನೆ ಮಾತನಾಡಿ ನಾನು ವಿದ್ಯಾರ್ಥಿಯಾಗಿದ್ದಾಗ ಎನ್ ಸಿ ಸಿ ಯುನಿಫಾರ್ಮ್ ಧರಿಸುವ ಭಾಗ್ಯ ನನಗೆ ಸಿಗಲಿಲ್ಲ. ಅದಾದ ನಂತರ ಎನ್ ಸಿ ಸಿ ಎ ಎನ್ ಓ ಆಗಿ 20 ವರ್ಷಗಳ ಕಾಲ ಅದನ್ನು ಧರಿಸುವ ಸದಾವಕಾಶ ಒದಗಿ ಬಂದಿತು. ಅನೇಕ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಲ್ಲಿ ಓದಿ ಸೇನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಇವತ್ತು ಇಸ್ರೆಲ್ನಂತಹ ಪುಟ್ಟ ದೇಶ ಕೃಷಿ ಸೇನೆ ಟೆಕ್ನಾಲಜಿ ಕ್ಷೇತ್ರಗಳಲ್ಲಿ ಮುಂದುವರೆದಿದೆ. ಅಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿ ದೇಶದ ಪ್ರತಿಯೊಬ್ಬ ವಿದ್ಯಾರ್ಥಿಯು ಕನಿಷ್ಠ ಎರಡು ವರ್ಷ ಸೈನಿಕ ಶಿಕ್ಷಣವನ್ನು ಕಡ್ಡಾಯಗೊಳಿಸಿದ್ದಾರೆ.
ದೇಶದಲ್ಲಿ ಇಂದು 22 ಎನ್ ಸಿ ಸಿ ಡೈರೆಕ್ಟ್ರೀಟ್ ಗಳಿವೆ. ನಾಯಕತ್ವ ಗುಣ ಬರುವುದು ಸಾಮಾನ್ಯವಲ್ಲ ಅದಕ್ಕೆ ಬೇಕಾಗುವಂತಹ ಧೈರ್ಯ ತಾಳ್ಮೆ ಡೆಡಿಕೇಶನ್ ನಮ್ಮಲ್ಲಿ ಇರಬೇಕು. ಎನ್ ಸಿ ಸಿ ಇಂದ ಶಿಕ್ಷಣ ಹಾಗೂ ಸೇನಾ ಕ್ಷೇತ್ರದಲ್ಲಿ ಅನೇಕ ಮೀಸಲಾತಿಗಳನ್ನು ಸರ್ಕಾರ ಒದಗಿಸಿದೆ ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಪ್ರೊ. ಜಿ ಟಿ ಭಟ್ ಸ್ವಾಗತಿಸಿ ಮಾತನಾಡಿ ನಮ್ಮ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದು ನಮಗೆ ಹೆಮ್ಮೆಯ ವಿಚಾರ ಇದರಿಂದ ಉಳಿದ ವಿದ್ಯಾರ್ಥಿಗಳು ಕೂಡ ಸ್ಪೂರ್ತಿಯನ್ನು ಪಡೆಯಬೇಕು ಎಂದು ಹೇಳಿದರು. ಸನ್ಮಾನಿತರಾದ ಸಿಕ್ಯೂಎಂಎಸ್ ಅಶ್ವಿನಿ ಹೆಗಡೆ ಮಾತನಾಡಿ ನನ್ನ ಸೀನಿಯರ್ ಹಾಗೂ ಶಿಕ್ಷಕರು ನನ್ನ ತಂದೆ ತಾಯಿಗಳು ನೀಡಿದ ಪ್ರೋತ್ಸಾಹದಿಂದ ಇಂದು ನಾನು ಈ ರೀತಿ ಸಾಧನೆ ಮಾಡಲು ಸಾಧ್ಯವಾಯಿತು.
ದೆಹಲಿಯ ಆರ್ಡಿಸಿ ಪಿರೇಡ್ನಲ್ಲಿ ಭಾಗವಹಿಸಲು ಸುಮಾರು ಏಳರಿಂದ ಎಂಟು ಕ್ಯಾಂಪ್ಗಳಲ್ಲಿ ನಾನು ಭಾಗವಹಿಸಿದೆ. ಎಷ್ಟೋ ದಿನ ನಿದ್ದೆ ಇಲ್ಲದೆ ತುಂಬಾನೇ ಕಷ್ಟಪಟ್ಟು ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದೆ. ನಾನು ಪಟ್ಟಂತಹ ಕಷ್ಟ ಕೊನೆಗೂ ಸಾರ್ಥಕವಾಯಿತು. ನಮ್ಮ ಸಂಪೂರ್ಣ ಪ್ರಯತ್ನವನ್ನ ನಾವು ಮಾಡುವ ಕೆಲಸಕ್ಕೆ ನೀಡಿದರೆ ಎಂತಹ ಸಾಧನೆ ಕೂಡ ಸಾಧ್ಯ ಎಂದು ಹೇಳಿದರು.
ಎಸ್ ಯು ಓ ನಿಖಿಲ್ ವೆರ್ಣೇಕರ್ ಮಾತನಾಡಿ ನಾನು ಆರ್ ಡಿ ಸಿ ಹಾಗೂ ಪಿಎಮ್ ರ್ಯಾಲಿ ಯಲ್ಲಿ ಭಾಗವಹಿಸುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ.ಸೆಮ್ ಪರೀಕ್ಷೆ ತಪ್ಪಿ ಹೋಗುತ್ತದೆ ಎಂದು ಹಿಂದೆ ಸರಿಯುವ ಮನಸ್ಸು ಉಂಟಾಗಿತ್ತು. ಪ್ರಾಚಾರ್ಯರು ಧೈರ್ಯ ತುಂಬಿ ಇಂದು ನಮ್ಮಿಬ್ಬರಿಗೂ ವಿಶೇಷ ಸೆಮ್ ಪರೀಕ್ಷೆ ನಡೆಸಲು ಅನುವು ಮಾಡಿಕೊಟ್ಟಿದ್ದಾರೆ ಎಂದು ತಮ್ಮ ಅನುಭವವನ್ನು ಹೇಳಿದರು.
ಇದೇ ಸಂದರ್ಭದಲ್ಲಿ ಎನ್ ಎಸ್ ಎಸ್ ನ ರಾಷ್ಟ್ರೀಯ ಐಕ್ಯತಾ ಶಿಭಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿನಿ ಸಹನಾ ಮರಾಠಿ ಇವರನ್ನೂ ಸನ್ಮಾನಿಸಲಾಯಿತು. ಕಾಲೇಜು ಉಪಸಮಿತಿ ಸದಸ್ಯ ಪ್ರಸಾದ್ ಭಟ್ ಉಪಸ್ಥಿತರಿದ್ದರು. ಎನ್ಸಿಸಿ ಅಧಿಕಾರಿ ರಾಘವೇಂದ್ರ ಹೆಗಡೆ ವಂದಿಸಿದರು. ಕು. ಅಂಕಿತಾ ಹೆಗಡೆ ನಿರೂಪಿಸಿದರು.