ಶಿರಸಿ: ಶಿರಸಿ ಅಂಚೆ ವಿಭಾಗ ಮಟ್ಟದ ಎರಡನೇ ಕ್ರಿಕೆಟ್ ಟೂರ್ನಮೆಂಟ್ ರವಿವಾರ ಶಿರಸಿಯ ಅರಣ್ಯ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ನೆರವೇರಿತು. ಈ ಟೂರ್ನಿಯಲ್ಲಿ ಶಿರಸಿ ವಿಭಾಗದ ಆರು ತಂಡಗಳು ಭಾಗವಹಿಸಿದ್ದವು. ಈ ಪಂದ್ಯಾವಳಿಯನ್ನು ಉದ್ಗಾಟಿಸಿದ ಶಿರಸಿ ಅಂಚೆ ವಿಭಾಗದ ಅಧೀಕ್ಷಕರಾದ ಹೂವಪ್ಪ ಜಿ., ನಮ್ಮ ದಿನನಿತ್ಯದ ಕೆಲಸದ ಒತ್ತಡವನ್ನು ಕಡಿಮೆ ಮಾಡಲು ಕ್ರೀಡೆ ಸಹಕಾರಿಯಾಗಿದೆ. ಎಲ್ಲರೂ ಸ್ವಯಂ ಪ್ರೇರಣೆಯಿಂದ ಭಾಗವಹಿಸಬೇಕು. ನಮ್ಮ ಆರೋಗ್ಯ ರಕ್ಷಣೆಯ ಹೊಣೆ ನಮ್ಮ ಮೇಲೆಯೇ ಇದೆ ಎಂದು ಅಭಿಪ್ರಾಯ ಪಟ್ಟರು. ಅರಣ್ಯ ಮಹಾ ವಿದ್ಯಾಲಯದ ಪ್ರಾಚಾರ್ಯರಾದ ಆರ್. ವಾಸುದೇವ್ , ಚಿಕ್ಕೋಡಿ ಅಂಚೆ ವಿಭಾಗದ ಅಧೀಕ್ಷಕರಾದ ವೆಂಕಟೇಶ್ ಬಾದಾಮಿ, ದಾಂಡೇಲಿ ಉಪ ವಿಭಾಗದ ಅಂಚೆ ನಿರೀಕ್ಷಕ ಶಿವಾನಂದ ದೊಡ್ಡಮನಿ ಉಪಸ್ಥಿತರಿದ್ದರು. ಈ ಟೂರ್ನಿಯಲ್ಲಿ ಶಿರಸಿ ಸೌತ್ ಲಯನ್ಸ್ ತಂಡ ಟ್ರೋಪಿಯನ್ನು ತನ್ನದಾಗಿಸಿಕೊಂಡಿತುˌ ಸೌತ್ ಪೋಸ್ಟಲ್ ವಾರಿಯರ್ಸ್ ತಂಡ ದ್ವಿತಿಯ ಸ್ಥಾನವನ್ನು ಗಳಿಸುವ ಮೂಲಕ ಟೂರ್ನಿ ಯಶಸ್ವಿಯಾಗಿ ಕೊನೆಗೊಂಡಿತು.
ದಿನನಿತ್ಯದ ಒತ್ತಡ ನಿವಾರಣೆಗೆ ಕ್ರೀಡೆ ಸಹಕಾರಿ: ಹೂವಪ್ಪ ಜಿ.
