ಯಲ್ಲಾಪುರ: ತಾಲೂಕಿನ ಚಂದಗುಳಿಯ ಘಂಟೆ ಗಣಪತಿ ದೇವಸ್ಥಾನದ ಅಷ್ಟಬಂಧ ಮಹೋತ್ಸವ, ಶಿಖರ ಪ್ರತಿಷ್ಠೆ, ಧ್ವಜ ಪ್ರತಿಷ್ಠೆ ನೆರವೇರಿಸಿದ ಸ್ವರ್ಣವಲ್ಲಿಯ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನೂತನ ದೇವಾಲಯ, ಯಾಗಶಾಲೆ ಮತ್ತು ಗುರುಭವನವನ್ನು ಲೋಕಾರ್ಪಣೆಗೊಳಿಸಿದರು.
ಗೋಕರ್ಣದ ಆಗಮಶಾಸ್ತ್ರಜ್ಞರಾದ ವೇ.ಗಜಾನನ ಭಟ್ಟ ಹಿರೇ, ವೇ.ಗಣಪತಿ ಭಟ್ಟ ಹಿರೇ ಹಾಗೂ ವೇ.ನಾಗಭೂಷಣ ಉಪಾಧ್ಯಾಯ ಇವರ ನೇತೃತ್ವದಲ್ಲಿ ಬೆಳಖಂಡದ ವೇ.ಗಣಪತಿ ಭಟ್ಟ ಹಾಗೂ ವೆಂಕಟ್ರಮಣ ಭಟ್ಟ ಇವರ ಪೌರೋಹಿತ್ಯದಲ್ಲಿ ಪ್ರತಿಷ್ಠಾ ವಿಧಿವಿಧಾನಗಳು, ಬ್ರಹ್ಮಣಸ್ಪತಿ ಹವನ, ಪೂರ್ಣಾಹುತಿ, ಕಲಾವೃದ್ಧಿ, ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ವಿದ್ವಾನ್ ನಾರಾಯಣ ದೇಸಾಯಿ ದಂಪತಿ ಶ್ರೀಗಳ ಪಾದಪೂಜೆ ನೆರವೇರಿಸಿದರು. ನಂತರ ಶ್ರೀಗಳ ಭಿಕ್ಷೆ ನೇರವೇರಿಸಲಾಯತು. ಅಲ್ಲದೇ, ಸುಮಾರು ೫ ಸಾವಿರಕ್ಕೂ ಹೆಚ್ಚು ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು.