ಹೊನ್ನಾವರ : ಸಾಲಕೋಡ ಅರೆಅಂಗಡಿ ಹತ್ತಿರದ ತೊಟ್ಟಿಲಗುಂಡಿಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂರು ಜನರಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
2022 ರ ನವೆಂಬರ್ 5 ರಂದು ಕುಟುಂಬದ ಆಸ್ತಿ ವಿಷಯಕ್ಕೆ ಅಣ್ಣತಮ್ಮಂದಿರ ನಡುವೆ ಜಗಳದಲ್ಲಿ ಕಬ್ಬಿಣದ ರಾಡ್ ನಿಂದ ಹೊಡೆದು ಒಡ ಹುಟ್ಟಿದ ಅಣ್ಣ ಹನುಮಂತ ಹೊನ್ನಪ್ಪ ನಾಯ್ಕ ಈತನನ್ನು ಕೊಲೆ ಮಾಡಲಾಗಿತ್ತು.
ಕೊಲೆ ಆರೋಪಿಗಳೆಂದು ಸಾಬೀತಾದ ತೊಟ್ಟಿಲಗುಂಡಿಯ ವಿನಾಯಕ ನಾಯ್ಕ, ಚಿದಂಬರ ನಾಯ್ಕ, ಜನಕಡ್ಕಲಿನ ಮಂಜುನಾಥ ನಾಯ್ಕ ಇವರಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರವಾರ ಜೀವಾವದಿ ಶಿಕ್ಷೆ ವಿಧಿಸಿ ಆದೇಶಿಸಿದೆ.