Slide
Slide
Slide
previous arrow
next arrow

ಹೆಲ್ತ್ ಕ್ರಿಕೆಟ್ ಲೀಗ್ ಯಶಸ್ವಿ

300x250 AD

ಶಿರಸಿ: ಕರ್ನಾಟಕ ಕೆಮಿಸ್ಟ್ & ಡ್ರಗ್ಗಿಸ್ಟ್ ಅಸೋಸಿಯೇಷನ್ ಶಿರಸಿ ಘಟಕ., ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘ (ರಿ ) ಶಿರಸಿ ಘಟಕ. ಕರ್ನಾಟಕ ರಾಜ್ಯ ಸರಕಾರಿ ಫಾರ್ಮಸಿ ಅಧಿಕಾರಿಗಳ ಸಂಘ(ರಿ ) ಜಿಲ್ಲಾ ಘಟಕ. ಹಾಗು ಕರ್ನಾಟಕ ಸರಕಾರಿ ಪ್ರಯೋಗಲಾಯ ತಂತ್ರಜ್ಞರ ಸಂಘ (ರಿ ) ಜಿಲ್ಲಾ ಘಟಕ್. ಇವರ ನಡುವೆ ನಡೆಯುವ ಪ್ರತಿಷ್ಠಿತ ಹೆಲ್ತ್ ಕ್ರಿಕೆಟ್ ಲೀಗ್ 2025. ಕ್ರಿಕೆಟ್ ಟೂರ್ನಮೆಂಟ್ ನ್ನು ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಕಪಿಲಾ ಫಾರ್ಮದ ರಾಜೇಂದ್ರ ಹೆಗಡೆ ದೀಪ ಬೆಳಗಿಸುವ ಮುಖಾಂತರ ಉದ್ಘಾಟನೆ ಮಾಡಿದರು.

ಅತಿಥಿಗಳಾಗಿ ಸರೋಜ ಫಾರ್ಮದ ಹಸ್ತಿಮಾಲ ಚೌದ್ರಿ ಹಾಗೂ ಪಟವರ್ಧನ ಫಾರ್ಮದ ಶ್ಯಾಮಸುಂದರ್ ಹೆಗಡೆ ಅಂಕಣ ಉದ್ಘಾಟನೆ ಮಾಡಿ ಶುಭ ಹಾರೈಸಿದರು. ಕರ್ನಾಟಕ ರಾಜ್ಯ ಔಷದ ಮಾರಾಟ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಹಾಗು ತಂಡದ ನಾಯಕ ಸಂತೋಷ ನವಿಲಗೋಣ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಉಳಿದ ತಂಡದ ನಾಯಕರಾದ ಮಂಜುನಾಥ್ ಪಟಗಾರ. ಮಹೇಶ್ ಡಿ ನಾಯಕ. ಅನೀಸ್ ಜವಳಿ. ಹಿರಿಯ ಸದಷ್ಯ ಮಧುಕರ ಹಳಕಾರ್ ಉಪಸ್ಥಿತರಿದ್ದರು. ಸಂಘಟಕರ ಪರವಾಗಿ ಕರ್ನಾಟಕ ರಾಜ್ಯ ಔಷದ ಮಾರಾಟ ಪ್ರತಿನಿಧಿಗಳ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ ಬಿ. ನಾಯ್ಕ ಕಾರ್ಯಕ್ರಮ ನಿರ್ವಹಿಸಿ ಪ್ರಾಸ್ತವಿಕ ಮಾತನಾಡಿದರು. ಅರೋಗ್ಯಕ್ಕಾಗಿ ಕ್ರೀಡೆ ಎಂಬ ಉದ್ದೇಶದಿಂದ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ನಾಲ್ಕು ಸಂಘಟನೆ ಅವರ ಸಹಕಾರದಿಂದ ಈ ಒಂದು ಟೂರ್ನಮೆಂಟ್ ನಡೆಯುತ್ತಿದೆ. ಎಲ್ಲರ ಸಹಾಯ ವನ್ನು ಸ್ಮರಿಸಿದರು. ಖಜಾಂಜಿ ವಿನಾಯಕ ನಾಯ್ಕ ಸ್ವಾಗತಿದರು ಪ್ರಕಾಶ ವಂದನಾರ್ಪಣೆ ಮಾಡಿದರು. ನಿತಿನ, ಪ್ರವೀಣ, ಕೃಷ್ಣಮೂರ್ತಿ ನವೀನ, ಆನಂದ್ ಸಂತೋಷ ಕುಂದರ್ಗಿ ಹಾಗೂ ವಿಶ್ವ ಹಲವಾರು ಸಂಘಟನೆ ಸದಸ್ಯರು ಸಹಕರಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಹೆಗಡೆ ಬ್ರದರ್ ಮಾಲಕರು ಶ್ರೀಧರ್ ಹೆಗಡೆ ವಿಜೇತ ತಂಡಗಳಿಗೆ ಟ್ರೋಫಿ ನೀಡಿ ಯಶಸ್ವಿ ಆಗಿ 3 ವರ್ಷದಿಂದ ನಡೆಸುತ್ತ ಬಂದಿರುವ ಸಂಘಟನೆ ಕೆಲಸವನ್ನು ಶ್ಲಾಘಿಸಿದರು. ಕರ್ನಾಟಕ ಔಷದ ಮಾರಾಟ ಮತ್ತು ಪ್ರತಿನಿಧಿಗಳ ತಂಡ ಹ್ಯಾಟ್ರಿಕ್ ವಿನ್ನರ್ ಪಟ್ಟ ತಮ್ಮ ಮುಡಿಗೆರಿಸಿ ಕೊಂಡಿತು. ರನ್ನರ್ ಅಪ್ ಆಗಿ ಕರ್ನಾಟಕ ರಾಜ್ಯ ಪ್ರಯೋಗ ಶಾಲಾ ತಂತ್ರಜ್ಞ ರ ಸಂಘ ಹೊರಹೊಮ್ಮಿತು.

300x250 AD
Share This
300x250 AD
300x250 AD
300x250 AD
Back to top