ಸಿದ್ದಾಪುರ: ಪಟ್ಟಣ ಸಮೀಪದ ಹಣಜೀಬೈಲ್‌ನಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಶಿರಸಿ ಜಿಲ್ಲಾ ಮತ್ತು ತಾಲೂಕು ಸಮಿತಿ ಹಾಗೂ ಮಹಿಳಾ ಪತಂಜಲಿ ಯೋಗ ಸಮಿತಿ ಸಹಯೋಗದಲ್ಲಿ ಏಳು ದಿನಗಳ ಉಚಿತ ಯೋಗ ತರಬೇತಿ ಶಿಬಿರವನ್ನು ಹಿರಿಯರಾದ ಎ.ಕೆ.ನಾಯ್ಕ ಉದ್ಘಾಟಿಸಿದರು.
ಯೋಗ ಶಿಕ್ಷಕಿ ಹಾಗೂ ತಾಲೂಕು ಅಭಾಸಾಪದ ಪದಾಧಿಕಾರಿಗಳಾದ ವೀಣಾ ಆನಂದ ಶೇಟ್, ಯೋಗ ಶಿಕ್ಷಕ ಮಂಜುನಾಥ ನಾಯ್ಕ ಯೋಗದ ಮಹತ್ವ ಹಾಗೂ ಅದರಿಂದಾಗುವ ಪ್ರಯೋಜನದ ಕುರಿತು ಮಾಹಿತಿ ನೀಡಿದರು.
ಅಭಾಸಾಪ ತಾಲೂಕು ಸಮಿತಿ ಅಧ್ಯಕ್ಷ ಆರ್.ಎನ್.ಹಳಕಾರ ಅಧ್ಯಕ್ಷತೆವಹಿಸಿದ್ದರು. ಪಪಂ ಸದಸ್ಯೆ ಕವಿತಾ ಪ್ರಕಾಶ ಹೆಗಡೆ ಹಣಜೀಬೈಲ್.
ತಾಲೂಕು ಅಭಾಸಾಪದ ಪದಾಧಿಕಾರಿ ಜ್ಯೋತಿ ವಿಜಯ ಹೆಗಡೆ ಉಪಸ್ಥಿತರಿದ್ದರು.
ಹಣಜೀಬೈಲ್‌ನಲ್ಲಿ ಉಚಿತ ಯೋಗ ತರಬೇತಿ ಶಿಬಿರ
