Slide
Slide
Slide
previous arrow
next arrow

ಅಡಕೆ ತೋಟಕ್ಕೆ ಕಾಡುಕೋಣಗಳ ದಾಳಿ

300x250 AD

ಸಿದ್ದಾಪುರ: ತಾಲೂಕಿನ ಮುಠ್ಠಳ್ಳಿ ಗ್ರಾಮದ ಬರಗಾಲಜಡ್ಡಿಯ ಎಸ್.ಆರ್.ಹೆಗಡೆ ಕುಂಬಾರಕುಳಿ ಅವರ ಅಡಕೆ ತೋಟಕ್ಕೆ ಕಾಡುಕೋಣಗಳ ಹಿಂಡು ದಾಳಿ ನಡೆಸಿ ಸುಮಾರು ಐವತ್ತಕ್ಕೂ ಹೆಚ್ಚು ಅಡಕೆ ಸಸಿ ಹಾಗೂ ಗಿಡಗಳನ್ನು ನಾಶಪಡಿಸಿದೆ.

ಎರಡರಿಂದ ಮೂರು ವರ್ಷದ ಅಡಕೆಸಸಿ ಹಾಗೂ ನಾಲ್ಕೈದು ವರ್ಷದ ಅಡಕೆ ಗಿಡ ಮತ್ತು ಫಸಲು ಬರುತ್ತಿರುವ ಅಡಕೆ ಗಿಡಗಳನ್ನು ಕಾಡುಕೋಣಗಳು ನಾಶಪಡಿಸಿದ್ದು ಕಾಡುಪ್ರಾಣಿಗಳಿಂದ ಬೆಳೆ ರಕ್ಷಣೆ ಮಾಡಿಕೊಳ್ಳುವುದು ಅಸಾಧ್ಯವಾಗಿದೆ. ಕಾಡುಪ್ರಾಣಿಗಳಿಂದ ಬೆಳೆ ಹಾನಿ ಆಗಬಾರದೆಂದು ಎಲ್ಲ ವ್ಯವಸ್ಥೆ ಮಾಡಿದ್ದರೂ ಏನೂ ಪ್ರಯೋಜನವಾಗಿಲ್ಲ. ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಕಾಡುಪ್ರಾಣಿಗಳಿಂದಾಗುತ್ತಿರುವ ಬೆಳೆಹಾನಿಯನ್ನು ತಡೆಯುವುದಕ್ಕೆ ತಾತ್ಕಾಲಿಕ ಯೋಜನೆಗಿಂತ ಶಾಶ್ವತವಾದ ಯೋಜನೆಗಳನ್ನು ರೂಪಿಸಬೇಕೆಂದು ಜಿಪಂ ಮಾಜಿ ಸದಸ್ಯರೂ ಆದ ಎಸ್.ಆರ್.ಹೆಗಡೆ ಕುಂಬಾರಕುಳಿ ಆಗ್ರಹಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top