ಭಟ್ಕಳ: ಪಟ್ಟಣದ ಸೋನಾರಕೇರಿಯಲ್ಲಿ ಇರುವ ದೈವಜ್ಞ ಬ್ರಾಹ್ಮಣ ಸಮಾಜದ ಶ್ರೀ ಗಣಪತಿ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಭಜನಾ ಸಪ್ತಾಹ ಫೆ.8ರಿಂದ ಆರಂಭಗೊಂಡಿದ್ದು, 18ರ ತನಕ ನಡೆಯಲಿದೆ. 35ನೇ ವರ್ಷದ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಮತ್ತು ಬೆಳ್ಳಿ ರಥೋತ್ಸವ ಫೆ.17ರಂದು ಜರುಗಲಿದೆ.
ಫೆ. 17 ಸೋಮವಾರ ಬೆಳಿಗ್ಗೆ 6 ಗಂಟೆಗೆ ಶ್ರೀ ದೇವರಿಗೆ ಫಲ ಪಂಚಾಮೃತ ಅಭಿಷೇಕ, ಸುಹಾಸಿನಿಯರಿಂದ ಕುಂಕುಮಾರ್ಚನೆ, ಗಣೇಶ ಪೂಜಾ, ಪುಷ್ಪಾಹ ಅಧಿವಾಸ ಪೂಜೆ ಮತ್ತು ಹೋಮ ರಥ ಶುದ್ಧಿ ಸಂಸ್ಕಾರಹವನ, ಮಹಾಪೂಜೆ, ದಂಡಬಲಿ ನಡೆಯಲಿದೆ.
ಮಧ್ಯಾಹ್ನ 12.30ರ ಅಭಿಜಿತ್ ಮುಹೂರ್ತದಲ್ಲಿ ಶ್ರೀದೇವರ ರಥಾರೋಹಣ, ರಥಕಾಣಿಕೆ, ಅನ್ನಸಂತರ್ಪಣೆ ಜರುಗಲಿದೆ. ಸಂಜೆ ರಥೋತ್ಸವ, ಮೃಗಯಾತ್ರೆ, ಸಂವಾದ ಪೂಜೆ ಇತ್ಯಾದಿ ನಡೆಯಲಿದೆ. ರಾತ್ರಿ 7.30ಕ್ಕೆ ಮೃಗಬೇಟೆ ಪ್ರಯುಕ್ತ ಆಷ್ಠಾವಧಾನ ಸೇವೆ ಮತ್ತು ಸಿಡಿಮದ್ದು ಪ್ರದರ್ಶನ ನಡೆಯಲಿದೆ.
ಫೆ.18ರ ಮಂಗಳವಾರ ಶ್ರೀ ಗಣೇಶ ಪೂಜೆ, ಪುಣ್ಯಾಹ, ಅಧಿವಾಸ ಪೂಜೆ ಹೋಮ, ವಸಂತಪೂಜೆ, ಅವಧೃತ ಸ್ನಾನ, ಅವರೋಹಣ, ಮಹಾಪೂರ್ಣಾಹುತಿ, ಕುಂಭಾಭಿಶೇಕ, ಮಹಾಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.