Slide
Slide
Slide
previous arrow
next arrow

ಫೆ.15ಕ್ಕೆ ವಿಮಲಾ ಭಾಗ್ವತರ ಕೃತಿಗಳ ಲೋಕಾರ್ಪಣಾ ಕಾರ್ಯಕ್ರಮ

300x250 AD

ಶಿರಸಿ: ಇಲ್ಲಿನ ನೆಮ್ಮದಿ ಕುಟೀರದಲ್ಲಿ ಸಮನ್ವಯ ಚಾರಿಟೇಬಲ್ ಟ್ರಸ್ಟ್ (ರಿ.) ಶಿರಸಿ, ಸಾಹಿತ್ಯ ಸಂಚಲನ (ರಿ.)ಶಿರಸಿ ಇವರ ಸಹಯೋಗದೊಂದಿಗೆ ವಿಮಲಾ ಭಾಗ್ವತರ ಎರಡು ಕೃತಿಗಳಾದ “ಶ್ರೀ ಕೃಷ್ಣ ಕಥಾಮಾಲಿಕೆ” ಮತ್ತು “ಮುಕ್ತಕ ಮಾಲೆ” ಯ ಲೋಕಾರ್ಪಣಾ ಕಾರ್ಯಕ್ರಮವನ್ನು ಫೆ.15, ಶನಿವಾರದಂದು ಅಪರಾಹ್ನ 3ಕ್ಕೆ ಏರ್ಪಡಿಸಲಾಗಿದೆ.

ಗಜಲ್ ಕವಿ, ಕನ್ನಡ ಸಾಹಿತ್ಯ ಪರಿಷತ್ತು, ಶಿರಸಿ ತಾಲ್ಲೂಕಾಧ್ಯಕ್ಷರಾದ  ಜಿ. ಸುಬ್ರಾಯ ಭಟ್ಟ ಬಕ್ಕಳ ಅವರು  ಕಾರ್ಯಕ್ರಮ ಉದ್ಘಾಟಿಸಲಿದ್ದು,  ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಿ.ಎಂ.ಭಟ್ ಕುಳುವೆ ವಹಿಸಲಿದ್ದಾರೆ.  ಮುಖ್ಯ ಅತಿಥಿಗಳಾಗಿ ಕರ್ನಾಟಕ ಜಾನಪದ ಪರಿಷತ್ತು ಶಿರಸಿ ತಾಲ್ಲೂಕಾಧ್ಯಕ್ಷರಾದ ಕೃಷ್ಣ ದತ್ತಾತ್ರೇಯ ಪದಕಿ ಆಗಮಿಸಲಿದ್ದಾರೆ.

 “ಶ್ರೀ ಕೃಷ್ಣ ಕಥಾ ಮಾಲಿಕೆ” ಕೃತಿಯನ್ನು ಹಿರಿಯ ಸಾಹಿತಿ ಗಣಪತಿ ಭಟ್ ವರ್ಗಾಸರ  ಪರಿಚಯಿಸಲಿದ್ದು, “ಮುಕ್ತಕ ಮಾಲೆ”  ಕೃತಿಯನ್ನು ಸಾಹಿತಿ, ಅ.ಕಾ.ಸಾ.ಪ ದ ಅಧ್ಯಕ್ಷ ರಾಜು ನಾಯ್ಕ ಬಿಸಲಕೊಪ್ಪ  ಪರಿಚಯಿಸಲಿದ್ದಾರೆ.

300x250 AD

ಸಾಹಿತ್ಯ ವಲಯದ ಗಣ್ಯರಾದ  ಡಾ. ಜಿ.ಎ. ಹೆಗಡೆ ಸೋಂದಾ, ಡಿ.ಎಸ್ ನಾಯ್ಕ್,  ಆರ್.ಡಿ. ಹೆಗಡೆ ಆಲ್ಮನೆ,  ಭಾಗೀರಥಿ ಹೆಗಡೆ, ಅಶೋಕ ಹಾಸ್ಯಗಾರ, ವಿ.ಪಿ ಹೆಗಡೆ ವೈಶಾಲಿ, ಎಸ್.ಎಂ.ಹೆಗಡೆ, ಜಗದೀಶ ಭಂಡಾರಿ, ಶೈಲಜಾ ಮಂಗಳೂರು, ವಾಸುದೇವ ಶಾನಭಾಗ್, ಜಿ.ವಿ. ಭಟ್ ಕೊಪ್ಪಲುತೋಟ, ಯಶಸ್ವಿನಿ ಶ್ರೀಧರಮೂರ್ತಿ, ಶರಾವತಿ ಭಟ್ಟ, ಸುಮಾ ಗಡಿಗೆಹೊಳೆ, ನಿರ್ಮಲಾ ಗೋಳಿಕೊಪ್ಪ ಹಾಗೂ ಸಾವಿತ್ರಿ ಶಾಸ್ತ್ರಿಯವರು ಗೌರವ ಉಪಸ್ಥಿತಿಯಲ್ಲಿ ಇರಲಿದ್ದಾರೆ.

ಕವಯಿತ್ರಿ, ಅಂಕಣಕಾರ್ತಿ, ಕಾಬಂದರಿಗಾರ್ತಿ ಭವ್ಯ ಹಳೆಯೂರು  ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆಂದು ಸಮನ್ವಯ ಟ್ರಸ್ಟನ ಅಧ್ಯಕ್ಷೆ, ಮುಕ್ತಕ ಕವಯಿತ್ರಿ, ಅ.ಕ.ಸಾ.ಪ.ದ ಮಹಿಳಾ ಪ್ರತಿನಿಧಿ ವಿಮಲಾ ಭಾಗ್ವತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top