ಹೊನ್ನಾವರ: ತಾಲೂಕಿನ ಗೇರಸೊಪ್ಪಾದ ಸೂಳೆಮುರ್ಕಿ ಕ್ರಾಸ್‌ನಲ್ಲಿ ರವಿವಾರ ಮಧ್ಯಾಹ್ನ ಸುಮಾರು 4 ಗಂಟೆಯ ಹೊತ್ತಿಗೆ ಸಾಗರದಿಂದ ಹೊನ್ನಾವರಕ್ಕೆ ಬರುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಬ್ರೇಕ್ ಫೇಲ್ ಆದ ಘಟನೆ ನಡೆದಿದೆ.
ಬ್ರೇಕ್ ಫೇಲ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಬಸ್ಸು ಗುಡ್ಡಕ್ಕೆ ಢಿಕ್ಕಿ ಹೊಡೆದಿದೆ. ಸುಮಾರು 49 ಪ್ರಯಾಣಿಕರು ಬಸ್ ನಲ್ಲಿದ್ದರು. ಅದೃಷ್ಟವಶಾತ್ ಬಸ್ ನಲ್ಲಿರುವ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.