ಶಿರಸಿ: ರಾಜದೀಪ ಟ್ರಸ್ಟ್ (ರಿ) ಶಿರಸಿ, ಇವರ ಸಹಯೋಗದಲ್ಲಿ, ತವರುಮನೆ ಹೋಮ್ ಸ್ಟೇ ವತಿಯಿಂದ “ಗಾನ-ವೈಭವ” ಹಾಗೂ “ಆಲೆಮನೆ ಹಬ್ಬ” ಫೆ.8, ಶನಿವಾರದಂದು ಸಂಜೆ 5 ಗಂಟೆಯಿಂದ ಆಯೋಜಿಸಲಾಗಿದೆ. ಗಾನ ವೈಭವದಲ್ಲಿ ಭಾಗವತಿಕೆಯಲ್ಲಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಗಾಯನದಲ್ಲಿ ರವಿ ಮೂರೂರು, ಮದ್ದಲೆಯಲ್ಲಿ ಮಂಜುನಾಥ ಹೆಗಡೆ ಕಂಚಿಮನೆ, ಚಂಡೆಯಲ್ಲಿ ಗಣೇಶ್ ಗಾಂವ್ಕರ್ ಕನಕನಹಳ್ಳಿ ಸಹಕರಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಸರ್ವರೂ ಆಲೆಮನೆ ಹಬ್ಬದ ಸವಿಯನ್ನು ಸವಿಯಲು ಸಂಘಟಕರು ಕೋರಿದ್ದಾರೆ.