ಯಲ್ಲಾಪುರ: ಕ್ರಿಯೇಟಿವ್ ತರಬೇತಿ ಕೇಂದ್ರದಲ್ಲಿ ಗ್ರೀನ್ ಕೇರ್ ಸಂಸ್ಥೆಯ ಕೌಶಲ್ಯವಿಕಾಸ ಯೋಜನೆಯಲ್ಲಿ ಬೇಸಿಕ್ ಪ್ಯಾಶನ್ ಡಿಸೈನಿಂಗ್ ತರಬೇತಿ ಹೊಂದಿದ ಶಿಬಿರಾರ್ಥಿಗಳಿಗೆ ಸ್ವಉದ್ಯೋಗ ಕಲ್ಪಿಸುವ ಉದ್ದೇಶದಿಂದ ಸ್ವಉದ್ಯೋಗ ಮಾಡಲು ಆಸಕ್ತರಿರುವ ಮಹಿಳೆಯರ ಗುಂಪನ್ನು ರಚಿಸಿ ಬಗೆ ಬಗೆಯ ಹೊಸ ಕೈ ಚೀಲಗಳನ್ನು ತಯಾರು ಮಾಡಿಕೊಡಲು ಮಾಹಿತಿ ನೀಡಿ ಸ್ವಉದ್ಯೋಗ ಮಾಡಲು ಪರಿಕರಗಳನ್ನು ಕೊಡಲಾಯಿತು.
ಈ ಕಾರ್ಯಕ್ರಮದಲ್ಲಿ ಗ್ರೀನ್ ಕೇರ್ ಸಂಸ್ಥೆಯ ಕಾರ್ಯದರ್ಶಿಗಳಾದ ಜಿತೇಂದ್ರ ಕುಮಾರ ಆರ್.ಎಂ. ನಿರ್ದೇಶಕರಾದ ಶ್ರೀಮತಿ ಆಶಾ ಡಿಸೋಜ, ಕ್ರಿಯೇಟಿವ್ ತರಬೇತಿ ಕೇಂದ್ರದ ಶ್ರೀಮತಿ ಶಾಲಿನಿ ಮುರುಡೇಶ್ವರ್ ಮತ್ತು ಗ್ರೀನ್ ಕೇರ್ ಸಂಸ್ಥೆಯ ಕಚೇರಿ ನಿರ್ವಾಹಕರಾದ ಶ್ರೀಮತಿ ಅಪ್ಷನಾ ಉಪಸ್ಥಿತರಿದ್ದರು.