ಜನಪದ ತ್ರಿಪದಿಗಳ ಸ್ಪರ್ಧೆ: ನಾಟಕ ಪ್ರದರ್ಶನ: ಗೌರವ ಸನ್ಮಾನ: ಪುಸ್ತಕ ಬಿಡುಗಡೆ
ಶಿರಸಿ : ಫೆ. 8 ರಂದು ನೆಮ್ಮದಿ ರಂಗಧಾಮದಲ್ಲಿ ಪ್ರಜ್ವಲ ಟ್ರಸ್ಟ್ ನವರಿಂದ ಎರಡನೇ ವರ್ಷದ ಪ್ರಜ್ವಲೋತ್ಸವ ಮುಂಜಾನೆ 10 ರಿಂದ ರಾತ್ರಿ 8 ಗಂಟೆಯವರೆಗೆ ಜರುಗಲಿದ್ದು, ಜನಸಂಪದ ಶೀರ್ಷಿಕೆಯಲ್ಲಿ ಜಿಲ್ಲಾ ಮಟ್ಟದ ಜಾನಪದ ತ್ರಿಪದಿಗಳ ಸ್ಪರ್ಧೆ” ನಂತರ ದಾಸವಾಣಿ ಕಾರ್ಯಕ್ರಮದಲ್ಲಿ ವಿನಾಯಕ ಹೆಗಡೆ ಮುತ್ಮುರ್ಡು ಗಾಯನ ಜೊತೆಯಲ್ಲಿ ಹಾರ್ಮೋನಿಯಂ ಶಂಕರ್ ಶಣೈ ಉಡುಪಿ, ತಬಲಾ ಗುರುಶಾಂತ ಸಿಂಗ್ ಮುಂಬೈ, ಫಕ್ವಾಜ್ ನಲ್ಲಿ ರಾಘವೇಂದ್ರ ಮಲ್ಯ ಮುಂಬೈ, ಮಂಜಿರಾದಲ್ಲಿ ದೇವದಾಸ್ ನಾಗರಮಠ ಮಂಗಳೂರು ಪಾಲ್ಗೊಳ್ಳಲಿದ್ದಾರೆ. ನಂತರ “ಪ್ರತಿಷ್ಠೆಯ ಕಲಹ” ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ. ನಾಟಕದ ಸಂಭಾಷಣೆಯನ್ನು ಖ್ಯಾತ ಅರ್ಥಧಾರಿ ದಿವಾಕರ ಹೆಗಡೆ ಕೆರೆಹೊಂಡ ಬರೆದಿದ್ದು, ಹಾಡುಗಳ ರಚನೆ ಸಂಗೀತ ಸಂಯೋಜನೆ, ಗಾಯನ ಸುರೇಶ ಹಕ್ಕಿಮನೆಯವರದ್ದಾಗಿದೆ. ಹಾರ್ಮೋನಿಯಂ ನಲ್ಲಿ ರಾಮಕೃಷ್ಣ ಶಾಸ್ತ್ರಿ ಹಕ್ಕಿಮನೆ ಮತ್ತು ತಬಲಾದೊಂದಿಗೆ ಸುಬ್ರಹ್ಮಣ್ಯ ಮಂಗಳೂರು ಸಹಕರಿಸಲಿದ್ದು, ನಿರ್ಮಲಾ ಹೆಗಡೆ ಗೋಳಿಕೊಪ್ಪ, ಬಿಂದು ಹೆಗಡೆ, ಕುಮಾರಿ ಧನ್ಯಾ, ಸುಮಾ ಪಾತ್ರಧಾರಿಗಳಾಗಿ ಅಭಿನಯಿಸಲಿದ್ದಾರೆ. ಸಂಧ್ಯಾ ಸಮಯದಲ್ಲಿ ಹಣತೆಯ ಬೆಳಕಿನಲ್ಲಿ ಸಾಮೂಹಿಕ ರಾಮರಕ್ಷಾ ಸ್ತೋತ್ರ ಪಠಣವಾಗಲಿದೆ.
ಸಭಾ ಕಾರ್ಯಕ್ರಮದಲ್ಲಿ ಶಾಸಕರಾದ ಭೀಮಣ್ಣ ನಾಯ್ಕ್, ಶಿವರಾಮ ಹೆಬ್ಬಾರ್ ಅಭ್ಯಾಗತರಾಗಿ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಶಿವಾನಂದ ಹೆಗಡೆ ಕಡತೋಕ ಬಹುಮಾನ ವಿತರಕರಾಗಿ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ
ಸಾಧನೆ ಗಾಗಿ ಸಂತೋಷ ಹೆಗಡೆ ನಿಡಗೂಡು ಸಿದ್ದಾಪುರ, ಕುಮಾರಿ ಅರ್ಚನಾ ಆರ್ಯಾ ಬೆಂಗಳೂರು, ಶ್ರೀಮತಿ ಗಾಯತ್ರಿ ಬೋಳಗುಡ್ಡೆ ಯಲ್ಲಾಪುರ ಸನ್ಮಾನ ಸ್ವೀಕರಿಸಲಿದ್ದಾರೆ. ಕಲಾ ಪೋಷಣೆಗಾಗಿ ಮಂಜುನಾಥ ಹೆಗಡೆ ಗೋಳಗೋಡು, ವೆಂಕಟೇಶ ಹೆಗಡೆ, ಬೆಂಗಳೆ ಗೌರವ ಸ್ವೀಕರಿಸಲಿದ್ದಾರೆ. ಶ್ರೀಮತಿ ಮಹಿಮಾ ಟಿ ರವರು ಬರೆದ “ಮಧುರ ಗಾನ” ಕೃತಿಯನ್ನು ಬರಹಗಾರ ಕೆ.ಆರ್. ಹೆಗಡೆ ಕಾನ್ಸೂರ ಲೋಕಾರ್ಪಣೆಗೊಳಿಸಿದರೆ, ನಾಗೇಶ ಮಧ್ಯಸ್ಥ ಕೃತಿ ಪರಿಚಯಿಸಲಿದ್ದಾರೆಂದು ಪ್ರಜ್ವಲ್ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.