ಯಲ್ಲಾಪುರ : ಗೋಸೇವಾ ಗತಿವಿಧಿ ಕರ್ನಾಟಕ, ರಾಧ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್ ಬಂಟ್ವಾಳ ಇವರು ಗೋವಿನ ರಕ್ಷಣೆಯ ಕುರಿತು ಕರ್ನಾಟಕದಾದ್ಯಂತ ಡಿ.31 ರಿಂದ ಹಮ್ಮಿಕೊಂಡ ನಂದಿ ರಥ ಯಾತ್ರೆ ಮಂಗಳವಾರ ಯಲ್ಲಾಪುರ ಪಟ್ಟಣಕ್ಕೆ ಆಗಮಿಸಿತು. ತಟಗಾರ್ ಕ್ರಾಸ್ ನಲ್ಲಿರುವ ವಿಶ್ವ ಹಿಂದೂ ಪರಿಷತ್ ಮಹಾಗಣಪತಿ ದೇವಸ್ಥಾನದಲ್ಲಿ ರಥ ಯಾತ್ರೆಗೆ ಭವ್ಯ ಸ್ವಾಗತವನ್ನು ಕೋರಲಾಯಿತು.
ರಥ ಹಾಗೂ ಗೋವನ್ನು ಪೂಜಿಸುವ ಮೂಲಕ ರಥಯಾತ್ರೆಯ ಮೆರವಣಿಗೆಗೆ ಚಾಲನೆ ನೀಡಲಾಯಿತು. ನಂತರ ಸಿದ್ದಿ ಸಮೂದಾಯದ ಮಹಳೆಯರ ಭಜನಾ ತಂಡ, ಹಾಗೂ ಸುಮಂಗಲಿಯರ ಪೂರ್ಣ ಕುಂಭದೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ರಥ ಯಾತ್ರೆ ಶಕ್ತಿ ಗಣಪತಿ ದೇವಸ್ಥಾನದಲ್ಲಿ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್, ಜಿಲ್ಲಾಧ್ಯಕ್ಷ ಎಸ್.ಎನ್.ಭಟ್ಟ ಏಕಾನ, ಜಿಲ್ಲಾ ಖಜಾಂಚಿ ನಾಗರಾಜ ಮದ್ಗುಣಿ ಗೋ ಸೇವಾ ಗತಿವಿದಿಯ ಗಣಪತಿ ಭಟ್ಟ ಕೋಲಿಬೇಣ, ತಾಲೂಕು ಸಂಯೋಜಕ ನಾರಾಯಣ ಸಭಾಹಿತ, ಪ್ರಮುಖರಾದ ಹರಿಪ್ರಕಾಶ ಕೋಣೆಮನೆ, ಪ್ರಸಾದ ಹೆಗಡೆ, ನಾಗೇಶ ಯಲ್ಲಾಪುರಕರ್, ಗೋಪಾಲಕೃಷ್ಣ ಗಾಂವ್ಕರ್, ಬಾಬು ಬಾಂದೇಕರ್, ಜಿ.ಎಸ್.ಭಟ್ಟ ಹಳವಳ್ಳಿ, ಅನಂತ ಗಾಂವ್ಕರ್, ರಾಮಕಷ್ಣ ಕೌಡಿಕೆರೆ, ಮಾರುತಿ ಘಟ್ಟಿ ಮುಂತಾದವರಿದ್ದರು.