ಶಿರಸಿ: ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ, ಧಾರವಾಡದ ಶಿರಸಿಯ ಹನುಮಂತಿಯಲ್ಲಿನ ಶೀತಲಕೇಂದ್ರದಲ್ಲಿ 76 ನೇ ಗಣರಾಜ್ಯೋತ್ಸವದ ನಿಮಿತ್ತ ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ಉಪಾಧ್ಯಕ್ಷರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೊಸ್ಕರ ಈ ದಿನಾಚರಣೆಯನ್ನು ನಾವು ಆಚರಿಸುತ್ತಿದ್ದು, ಈ ಘಳಿಗೆಯ ಮಹತ್ವವನ್ನು ಪ್ರತಿಯೊಬ್ಬ ನಾಗರೀಕನು ಅರಿತು ಅರ್ಥಪೂಣವಾಗಿ ಬದುಕಬೇಕಿದೆ ಎಂದರು. ಭಾರತದ ಸಂವಿಧಾನವನ್ನು ರಚಿಸಿದ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ರಾಜಕೀಯವಾಗಿ ಇಂದಿನ ರಾಜಕಾರಣಿಗಳು ತಮಗೆ ಮನಬಂದಂತೆ ಬಳಸಿಕೊಳ್ಳುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದ್ದು, ನಮ್ಮ ಸಂವಿಧಾನದ ರಚನೆಕಾರರಿಗೆ ಸಿಗಬೇಕಾಗಿರುವ ಗೌರವ ಸಿಗದಿರುವುದು ಬಹಳ ಬೇಸರದ ವಿಷಯವಾಗಿದೆ.ಡಾ. ಬಿ.ಆರ್. ಅಂಬೇಡ್ಕರ್ ನಮ್ಮೆಲ್ಲರಿಗೆ ನೀಡಿದ ಸಂವಿಧಾನದ ಪ್ರಕಾರ ನಾವೆಲ್ಲರೂ ಬಾಳತೊಡಗಿದರೆ ನಮಗೆ ಯಾವುದೇ ಸಮಸ್ಯೆಗಳು ಬರುವುದಿಲ್ಲ, ಆದರೆ ಕೆಲ ರಾಜಕೀಯ ನಾಯಕರುಗಳು ನಮ್ಮ ಸ್ವಾರ್ಥಕ್ಕಾಗಿ ಸಂವಿಧಾನದ ತಿದ್ದುಪಡಿಯನ್ನು ಮಾಡಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಆದರೆ ನಾವು ಈಗಿನ ಪೀಳಿಯ ಮಕ್ಕಳಲ್ಲಿ ಸಂವಿಧಾನದ ಕುರಿತು ಗೌರವ ಅಭಿಮಾನ ಹಾಗೂ ದೇಶಭಕ್ತಿಯ ಭಾವನೆಯನ್ನು ನಾವು ಈಗಿನಂದಲೇ ಅವರಿಗೆ ಅರಿವು ಮೂಡಿಸಿ ನಾವೇಲ್ಲರೂ ಭಾರತೀಯರು,ಸಮಾನರು ಎಂಬ ಭಾವನೆ ಮೂಡುವಂತೆ ನೋಡಿಕೊಳ್ಳಬೇಕಾಗಿದೆ ಹಾಗೂ ನಮ್ಮ ದೇಶಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಆ ಇತಿಹಾಸ ಇತರ ದೇಶಗಳ ಇತಿಹಾಸಕ್ಕಿಂತ ಮಾದರಿಯಾಗಿದೆ ಅದರಂತೆಯೇ ನಾವುಗಳೂ ಸಹ ಉತ್ತಮ ಕೆಲಸಗಳನ್ನು ಮಾಡುವ ಮೂಲಕ ಇತರರಿಗೆ ಮಾದರಿಯಾಗಬೇಕಿದೆ ಎಂದರು.
ಜಿಲ್ಲೆಯಲ್ಲಿ ಹಾಲು ಶೇಖರಣೆಯ ಪ್ರಮಾಣ ಗಣನೀಯವಾಗಿ ಏರಿಕೆಗೊಂಡಿದ್ದು, ನಿಮ್ಮೆಲ್ಲರ ಪರಿಶ್ರಮದಿಂದ ಇದು ಸಾಧ್ಯವಾಗಿದೆ ಎಂದರು.ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಹಾಲು ಶೇಖರಣೆಯಾಗಲು ನಾವು ಮುಂಬರುವ ದಿನಗಳಲ್ಲಿ ಎಲ್ಲರೂ ಒಟ್ಟುಗೂಡಿ ನಮ್ಮ ಈ ಸಂಸ್ಥೆಯನ್ನು ನಮ್ಮ ಮನೆಯಂತೆಯೇ ಭಾವಿಸಿ ನಾವು ಕೆಲಸ ಮಾಡಿದರೆ ಮಾತ್ರ ಸಂಸ್ಥೆಯ ಏಳಿಗೆಯನ್ನು ನಾವು ಕಾಣುವುದರ ಜೊತೆಗೆ ನಾವೆಲ್ಲರೂ ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿ ಉತ್ತಮ ಗುಣಮಟ್ಟದ ಹಾಲನ್ನು ಅಧಿಕ ರೂಪದಲ್ಲಿ ಸಂಗ್ರಹಣೆ ಮಾಡುವ ಮೂಲಕ ಜಿಲ್ಲೆಯ ಹಾಲು ಉತ್ಪಾದಕ ರೈತರ ಏಳಿಗೆಗೆ ಶ್ರಮಿಸಬೇಕಾಗಿದ್ದು, ಹಾಲು ಉತ್ಪಾದಕ ರೈತಪರ ಕೆಲಸಗಳನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ಮಾಡಿ ಜನರಲ್ಲಿ ಹೈನುಗಾರಿಕೆಯ ಬಗ್ಗೆ ಹೆಚ್ಚಿನ ಆಸಕ್ತಿ ಮೂಡುವಂತೆ ಮಾಡಬೇಕಿದೆ. ಎಂದರು.
ಈ ಸಂದರ್ಭದಲ್ಲಿ ಧಾರವಾಡ ಸಹಕಾರ ಹಾಲು ಒಕ್ಕೂಟದ ನಿರ್ದೇಶಕರಾದ ಪರಶುರಾಮ ವೀರಭದ್ರ ನಾಯ್ಕ, ಜಿಲ್ಲಾ ಮುಖ್ಯಸ್ಥರಾದ ಪ್ರಸಾದ ಎಸ್ ಬಿಜೂರ್, ಶೀತಲಕೇಂದ್ರದ ವ್ಯವಸ್ಥಾಪಕರಾದ ಕೃಷ್ಣ ಕೆ. ಎನ್., ದೇವೆಂದ್ರಕುಮಾರ,ಶರಣು ಎಂ. ಹಾಗೂ ಧಾರವಾಡ ಸಹಕಾರ ಹಾಲು ಒಕ್ಕೂಟದ ಸಿಬ್ಬಂಧಿಗಳು ಉಪಸ್ಥಿತರಿದ್ದರು.