ಶಿರಸಿ: ನಗರದ ಹೊರ ವಲಯದಲ್ಲಿನ ವೇದ ಆರೋಗ್ಯ ಕೇಂದ್ರ ನಿಸರ್ಗಮನೆಗೆ ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಡಾ. ವೆಂಕಟ್ರಮಣ ಹೆಗಡೆ ನೇತೃತ್ವದಲ್ಲಿ ನಡೆಸಲಾಗುತ್ತಿರುವ ಆರೋಗ್ಯ ಕೇಂದ್ರದಲ್ಲಿ ಭಾರತೀಯ ವೈದ್ಯಕೀಯ ಪದ್ಧತಿಯ ಅದರಲ್ಲೂ ನೈಸರ್ಗಿಕ ವಿಧಾನದ ಚಿಕಿತ್ಸಾ ಸೌಲಭ್ಯ ನೀಡುತ್ತಿರುವದಕ್ಕೆ ಬಣ್ಣಿಸಿದ ಹೊರಟ್ಟಿ, ಇಲ್ಲಿನ ವ್ಯವಸ್ಥೆ, ಚಿಕಿತ್ಸಾ ಸೌಲಭ್ಯಗಳ ಕುರಿತು ಶ್ಲಾಘಿಸಿದರು.
ನಿಸರ್ಗಮನೆಯ ವಾತಾವರಣದ ಕುರಿತೂ ಮೆಚ್ಚುಗೆ ಸೂಚಿಸಿದ ಅವರು, ಪ್ರಕೃತಿ ಮಡಿಲಿನ ಕೇಂದ್ರ ಎಂದರು.
ಈ ವೇಳೆ ಹೇಮಲತಾ ಹೊರಟ್ಟಿ, ನಿಸರ್ಗ ಮನೆಯ ತಜ್ಞ ವೈದ್ಯ ಡಾ. ವೆಂಕಟರಮಣ ಹೆಗಡೆ, ಪ್ರಮುಖರಾದ ನಾರಾಯಣ ಹೆಗಡೆ, ನಾರಾಯಣ ದಾಯಿಮನೆ, ದಿನೇಶ ನೇತ್ರೇಕರ್, ಭವಾನಿ ಹೆಗಡೆ, ಸಂಗೀತಾ ಹೆಗಡೆ ಸೇರಿದಂತೆ ಅನೇಕರಿದ್ದರು.