ದಾಂಡೇಲಿ : ನಗರ ಸಭೆಯ ನೂತನ ಪೌರಾಯುಕ್ತರಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯವರಾದ ವಿವೇಕ್ ಬನ್ನೆ ಸೋಮವಾರ ಸಂಜೆ ಅಧಿಕಾರವನ್ನು ಸ್ವೀಕರಿಸಿದರು.
ವಿವೇಕ್ ಬನ್ನೆ ಬೆಳಗಾವಿ ಜಿಲ್ಲೆಯ ಮೂಡಲಗಿ ಪುರಸಭೆಯ ಮುಖ್ಯಾಧಿಕಾರಿಯಾಗಿ ಸೇವೆಯನ್ನು ಸಲ್ಲಿಸಿ ಅಲ್ಲಿಂದ ದಾಂಡೇಲಿ ನಗರಸಭೆಯ ಪೌರಾಯುಕ್ತರಾಗಿ ವರ್ಗಾವಣೆಗೊಂಡಿದ್ದರು.
ನಗರದ ಜನತೆಗೆ ಹಾಗೂ ನಗರಕ್ಕೆ ಅತಿ ಅವಶ್ಯ ಮೂಲಸೌಕರ್ಯಗಳಾದ ಸ್ವಚ್ಚತೆ, ಸಮರ್ಪಕ ಕುಡಿಯುವ ನೀರು ಪೊರೈಕೆ ಮತ್ತು ಸಮರ್ಪಕ ಬೀದಿ ದೀಪ ನಿರ್ವಹಣೆಗೆ ಮೊದಲ ಆದ್ಯತೆಯನ್ನು ನೀಡಲಾಗುವುದು ಎಂದು ನೂತನ ಪೌರಾಯುಕ್ತರಾದ ವಿವೇಕ್ ಬನ್ನೆ ಅವರು ಮಾಧ್ಯಮದ ಜೊತೆ ಮಾತನಾಡುತ್ತಾ ಹೇಳಿದರು.