ಶಿರಸಿ: ಇತ್ತೀಚೆಗೆ ಕೊನೆಗೌಡರು ಕೊನೆ ಕೊಯ್ಯುವಾಗ ಬಿದ್ದು ಜೀವಕ್ಕೆ ಅಪಾಯವನ್ನು ಮಾಡಿಕೊಳ್ಳುವುದು ಕಾಣುತ್ತಿದ್ದೇವೆ. ಇದನ್ನ ಮನಗಂಡು ಇಂಡಿಯನ್ ಪೋಸ್ಟ್ ಆಫೀಸ್ ಯೋಜನೆ ಆದ 10 ಲಕ್ಷ ರೂಪಾಯಿಯಷ್ಟು ಪ್ರಾಣಾಪಾಯ ಸಂಭವಿಸಿದಾಗ ಅವರ ಕುಟುಂಬಕ್ಕೆ ಬರುವಂತೆ, ಶಸ್ತ್ರ ಚಿಕಿತ್ಸೆಗೆ 60,000 ವರೆಗೆ ಸಹಾಯ ಸಿಗುವ ಇನ್ಸುರೆನ್ಸ್ ಗ್ರೂಪ್ ಅಕ್ಸಿಡೆಂಟ್ ಗಾರ್ಡ್ ಪಾಲಿಸಿಯ 1 ವರ್ಷದ ಅವಧಿಗೆ ವಿಮಾ ಕಂತನ್ನು ತುಂಬಿಕೊಡಲು ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ನಿರ್ಧಾರ ಮಾಡಿದೆ, ಕೊನೆಗೌಡರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿ.
ಜ.29, ಬುಧವಾರ ಬೆಳಿಗ್ಗೆ 10 ಗಂಟೆಯಿಂದ ನಗರದ ಎಪಿಎಂಸಿ ಆವರಣದ ಟಿಆರ್‌ಸಿ ಸಭಾಂಗಣದಲ್ಲಿ ಕಾರ್ಯಕ್ರಮ ಪ್ರಾರಂಭವಾಗಲಿದೆ. ಆಧಾರ ಕಾರ್ಡ್ ಹಾಗು ಮೊಬೈಲ್ ಕಡ್ಡಾಯವಾಗಿ ತರಬೇಕೆಂದು ಪ್ರಕಟಣೆ ಮೂಲಕ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ : ಜಿ. ಜಿ . ಹೆಗಡೆ 9740673262 ಅವರನ್ನು ಸಂಪರ್ಕಿಸಬಹುದು.