ಹೊನ್ನಾವರ: ತಾಲೂಕಿನ ಹಡಿನಬಾಳ ಮಕ್ಕಿ ವಿಷ್ಣುಮೂರ್ತಿ ದೇವಸ್ಥಾನದ ಕ್ರಾಸ್ ಹತ್ತಿರ ಆಟೋರಿಕ್ಷಾ ಪಲ್ಟಿಯಾಗಿ ಒರ್ವ ಮಹಿಳೆ ಮೃತಪಟ್ಟು,ಇರ್ವರು ಗಾಯಾಳುವಾದ ಘಟನೆ ನಡೆದಿದೆ.
ಆಟೋ ಚಾಲಕ ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ಉಪ್ಪೋಣಿ ಕಡೆಯಿಂದ ಹೊನ್ನಾವರ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷ್ಯತನದಿಂದ ಆಟೋ ಚಲಾಯಿಸಿಕೊಂಡು ಬಂದಿದ್ದಾನೆ.
ಈ ವೇಳೆ ರಸ್ತೆಯಲ್ಲಿ ಅಡ್ಡಬಂದ ಹಂದಿಯನ್ನು ತಪ್ಪಿಸಲು ಹೋಗಿ ತನ್ನ ಚಾಲನಾ ನಿಯಂತ್ರಣ ಕಳೆದುಕೊಂಡು ಓಮ್ಮೆಲೆ ಆಟೋರಿಕ್ಷಾವನ್ನು ಪಲ್ಟಿ ಕೆಡವಿದ್ದಾನೆ. ಆಟೋರಿಕ್ಷಾದಲ್ಲಿ ಪ್ರಯಾಣಿಸಿಕೊಂಡು ಬಂದಿದ್ದ ಚಂದಾವರದ ಜಿಲಾನಿ ಮೊಹಲ್ಲಾದ ಶಬೀನಾ ಮೊಹಮ್ಮದ ನಾಸೀರ ಸಿದ್ದುಬಾಡಿ ಇವರಿಗೆ ತಲೆಗೆ ಹಾಗೂ ಇವರ ಮಗಳಾದ ಇಪಾ ಮೊಹಮ್ಮದ ನಾಸೀರ ಸಿದ್ದುಬಾಡಿ, ಇವಳಿಗೆ ಎಡಭುಜಕ್ಕೆ ಬೆನ್ನಿಗೆ ಸೊಂಟಕ್ಕೆ ಗಾಯನೋವಾಗಿದೆ. ಕುಮಟಾ ಮದ್ಗುಣಿಯ ಫಾತಿಮಾ ಮೈದಿನ ಖಾನ ಇವರಿಗೆ ಬಲಗಾಲಿನ ಮೊಣಗಂಟಿಗೆ, ಹಣೆಗೆ ಗಾಯನೋವಾಗಿತ್ತು. ಕುಮಟಾ ಮದ್ಗುಣಿಯ ಅಖಿಲಾ ಲಿಯಾಕತ್ ಖಾನ್ ಇವರಿಗೆ ತಲೆಗೆ, ಎಡಗಣ್ಣಿಗೆ,ಸೊಂಟಕ್ಕೆ ಗಾಯನೋವಾಗಿತ್ತು. ಗಾಯಾಳುಗಳಿಗೆ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಈ ಪೈಕಿ ಲಿಯಾಕತ್ ಖಾನ್ ಅವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೇ ರವಿವಾರ ಮೃತಪಟ್ಟಿದ್ದಾರೆ.
ಈ ಕುರಿತು ಕುಮಟಾ ಹಳಕಾರದ ಆಟೋ ಚಾಲಕ ಸಚೀನ್ ವಿಷ್ಣು ಪಟಗಾರ ವಿರುದ್ದ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.