Slide
Slide
Slide
previous arrow
next arrow

ಲಯನ್ಸ್ ಶಾಲೆಯಲ್ಲಿ ಅದ್ದೂರಿಯಾಗಿ ಗಣರಾಜ್ಯೋತ್ಸವ ಆಚರಣೆ

300x250 AD

ಶಿರಸಿ: ನಗರದ ಲಯನ್ಸ್ ಶಾಲೆಯ ಪ್ರಾಂಗಣದಲ್ಲಿ 76ನೇ ಗಣರಾಜ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ವಿದ್ಯಾರ್ಥಿ ಪ್ರತಿನಿಧಿಯಾದ ಕುಮಾರಿ ಪೃಥ್ವಿ ಉಮೇಶ ಹೆಗಡೆ ನಾಯಕತ್ವದಲ್ಲಿ ಬ್ಯಾಂಡ್ಸೆಟ್ ಮೂಲಕ ಗಣ್ಯರನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು.

ಲಯನ್ಸ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಲಯನ್ ಪ್ರಭಾಕರ್ ಹೆಗಡೆ ಧ್ವಜಾರೋಹಣ ನಡೆಸಿ ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಬ್ರಿಟಿಷರ ಆಡಳಿತದಿಂದ ಪುರಾತನ ಗುರುಕುಲ ಪದ್ಧತಿ ನಶಿಸಿ ಹೋಯಿತು. ಆದರೂ ಇಂದು ಭಾರತ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಸಾಧಿಸುತ್ತಿದೆ .ಮಹಿಳೆಯರು ಎಲ್ಲ ರಂಗದಲ್ಲೂ ಸಾಧನೆ ಮಾಡುತ್ತಿದ್ದಾರೆ ಎಂದರು. ಲಯನ್ಸ್ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಪ್ರೊಫೆಸರ್ ಲಯನ್ ರವಿ ನಾಯಕ ಅವರು ಸಂವಿಧಾನದ ಮಹತ್ವ ತಿಳಿಸಿ ವಿದ್ಯಾರ್ಥಿಗಳಿಗೆ ಬಲಿಷ್ಠ ಭಾರತ ನಿರ್ಮಿಸುವ ನಾಗರೀಕರಾಗಿ ಎಂದು ಹೇಳಿ ಎಲ್ಲರನ್ನು ಸ್ವಾಗತಿಸಿದ್ದರು. ದೈಹಿಕ ಶಿಕ್ಷಕರಾದ ನಾಗರಾಜ ಜೋಗಳೆಕರ್ ಇವರ ತರಬೇತಿಯಲ್ಲಿ ಕುಮಾರ್ ಸಿರಿ ಬೋಂಗಾಳೆ ಹಾಗೂ ಕುಮಾರಿ ಅನನ್ಯ ನಾಯ್ಕ್, ಹಾಗೂ ಸ್ಕೌಟ್ ಮಾಸ್ಟರ್ ರಾಘವೇಂದ್ರ ಹೊಸೂರು ತರಬೇತಿಯಲ್ಲಿ ಶ್ರೀರಾಮ ನಾಗರಕಟ್ಟೆ , ಗೈಡ್ ಕ್ಯಾಪ್ಟನ್ ಶ್ರೀಮತಿ ಚೇತನ ಪಾವಸ್ಕರ್ ಅವರ ತರಬೇತಿಯಲ್ಲಿ ಕುಮಾರಿ ಅದಿತಿ ಅನಿಲ್ ನಾಯ್ಕ್, ಪಥಸಂಚಲನದ ಮೂಲಕ ಗಣ್ಯರಿಗೆ ಗೌರವ ಸಲ್ಲಿಸಿದರು. ದೈಹಿಕ ಶಿಕ್ಷಕಿ ಶ್ರೀಮತಿ ಚೇತನ ಪಾವಸ್ಕರ್ ಅವರ ತರಬೇತಿಯಲ್ಲಿ ಪ್ರಪ್ರಥಮ ಬಾರಿಗೆ ಕಿರಿಯ ಪ್ರಾಥಮಿಕ ಶಾಲೆಯ ಕುಮಾರಿ ಶಾನ್ವಿತಾ ಸುನಿಲ್ ಶೆಟ್ಟಿ ಅವಳ ತಂಡ ಪಥಸಂಚಲನದಲ್ಲಿ ಭಾಗವಹಿಸಿ ಕರತಾಡನಗಳ ಮೂಲಕ ನೆರೆದಿರುವ ಎಲ್ಲರ ಮೆಚ್ಚುಗೆಯನ್ನು ಪಡೆದರು,ಹಾಗೂ ಸಹ ಶಿಕ್ಷಕಿ ಜ್ಯೋತಿ ಮುರುಡೇಶ್ವರ ಅವರ ತರಬೇತಿಯಲ್ಲಿ ಯುಕೆಜಿ ವಿದ್ಯಾರ್ಥಿಗಳಿಂದ ಹೂಪ್ಸ್, ನಾಗರಾಜ ಜೋಗಳೇಕರ ಅವರ ತರಬೇತಿಯಲ್ಲಿ ಅರಬಿಕ್ ನೃತ್ಯ, ಚೇತನ ಪಾವಸ್ಸ್ಕರ್ ಅವರ ತರಬೇತಿಯಲ್ಲಿ ಡಬ್ಬಲ್ಸ್ ಲೆಜಿಮ್, ಲಾಟಿ, ಫ್ಲಾಗ್ ಹಾಗೂ ರಂಗ ಪರಿಕರಗಳ ಕವಾಯತ್ ಎಲ್ಲರ ಮೆಚ್ಚುಗೆಯನ್ನು ಪಡೆಯಿತು.

300x250 AD

ಕಾರ್ಯಕ್ರಮದಲ್ಲಿ ಲಯನ್ ಶಿಕ್ಷಣ ಸಂಸ್ಥೆಯ ಕೋಶಾಧ್ಯಕ್ಷರಾದ ಲಯನ್ ಉದಯ ಸ್ವಾದಿ, ಸಹಕಾರಿದರ್ಶಿಗಳಾದ ಲಯನ್ ವಿನಯ ಹೆಗಡೆ, ಸದಸ್ಯರುಗಳಾದ ಲಯನ್ ತ್ರಿವಿಕ್ರಂ ಪಠವರ್ಧನ್, ಲಯನ್ ಶ್ರೀಕಾಂತ್ ಹೆಗಡೆ ,ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲಯನ್ ಅಶ್ವತ ಹೆಗಡೆ ಇನ್ನಿತರರ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಶ್ವೇತ ವಸ್ತ್ರಧಾರಿಗಳಾಗಿ ಶೈಕ್ಷಣಿಕ ಮುಖ್ಯಸ್ಥರು, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗರು ಪಾಲಕ ವೃಂದ, ಶಾಲೆಯ ಹಿರಿಯ ವಿದ್ಯಾರ್ಥಿಗಳು ಊರ ನಾಗರಿಕರು ಸಡಗರದಿಂದ ಉಪಸ್ಥಿತರಿದ್ದರು. ಲಯನ್ಸ್ ಸಮೂಹ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಶಶಾಂಕ್ ಹೆಗಡೆ ಎಲ್ಲರನ್ನೂ ವಂದಿಸಿದರು. ಸಹ ಶಿಕ್ಷಕಿ ಶ್ರೀಮತಿ ರೇಷ್ಮಾ ಮಿರಾಂಡ ಕಾರ್ಯಕ್ರಮವನ್ನು ನಿರೂಪಿಸಿದರು. ಸಿಹಿ ವಿತರಣೆ ಮಾಡಿ ಕಾರ್ಯಕ್ರಮ ಪೂರ್ಣಗೊಳಿಸಲಾಯಿತು. ಸಹ ಶಿಕ್ಷಕಿ ನಾಗರತ್ನ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಪೆಟ್ರೋಲ್ ಲೀಡರ್ ಸಿಂಚನ ಹೆಗಡೆ ಇವಳ ತಂಡ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಧ್ವಜಾರೋಹಣ ಕಾರ್ಯಕ್ರಮಕ್ಕೆ ಪಾಲ್ಗೊಂಡಿದ್ದರು.
ಮಾರಿಕಾಂಬ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಪತಸಂಚನದಲ್ಲಿ ರಾಘವೇಂದ್ರ ಹೊಸೂರ್ ತರಬೇತಿಯಲ್ಲಿ ಅವರು ಕುಮಾರ್ ಶ್ರೀರಾಮ್ ನಾಗರಕಟ್ಟೆ ಅವನ ತಂಡ ನಾಲ್ಕನೇ ಸ್ಥಾನವನ್ನು ಪಡೆದು, ಗೈಡ್ ಕ್ಯಾಪ್ಟನ್ ಚೇತನ ಪವಾಸ್ಕರ್ ಅವರ ತರಬೇತಿಯಲ್ಲಿ ಅದಿತಿ ಅನಿಲ್ ನಾಯ್ಕ್ ಅವಳ ತಂಡ ಐದನೇ ಸ್ಥಾನವನ್ನು ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಈ ಎಲ್ಲ ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತ ಮಂಡಳಿ ಪ್ರಾಂಶುಪಾಲರು ಶಿಕ್ಷಕ ವೃಂದ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು
ಅಭಿನಂದಿಸಿರುತ್ತಾರೆ.

Share This
300x250 AD
300x250 AD
300x250 AD
Back to top