ಶಿರಸಿ: ತಾಲೂಕಿನ ಸಂತೋಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ದಾಸನಕೊಪ್ಪ ಇವರಿಂದ ಬಿಪಿ ಹಾಗೂ ಶುಗರ್ ತಪಾಸಣಾ ಶಿಬಿರವನ್ನು ನಡೆಸಲಾಯಿತು. ಶಿಬಿರದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಸದಸ್ಯ ಬದ್ರು ಗೌಡ್ರು ವಹಿಸಿದ್ದರು. ವೇದಿಕೆಯಲ್ಲಿ ಡಾ. ರೀದಾ ಫಾತಿಮಾ, ಆಸ್ಪತ್ರೆ ಸಿಬ್ಬಂದಿ ಚಿತ್ರಾ ಧಾರವಾಡಕರ್, ತೆಸಿನ್ ಅಂಗನವಾಡಿ ಕಾರ್ಯಕರ್ತೆ ಸವಿತಾ ಕೆ ಬಿಜಾಪುರ್ ಆಶಾ ಕಾರ್ಯಕರ್ತೆ ಗೀತಾ ವಿ. ತಂಬ್ಳಿ ಗ್ರಾಮ ಹಿರಿಯರಾದ ಎಸ್.ಬಿ. ಗೌಡ್ರು ಬಂಗಾರಣ್ಣ ಲೇಕದ್ ಪ್ರಭು ಗೌಡ್ರು, ಸ್ನೇಹಾ ಆಚಾರಿ, ಪರಸಪ್ಪ ಜಾಡರ್, ಎಸ್‌ಡಿಎಂಸಿ ಅಧ್ಯಕ್ಷರಾದ ರವಿ ಬೋವಿ ಇನ್ನೂ ಅನೇಕ ಗ್ರಾಮಸ್ಥರು ಹಾಜರಿದ್ದರು.
ಈ ಸಂದರ್ಭದಲ್ಲಿ ಡಾ. ರಿದಾ ಫಾತಿಮಾ ಇವರನ್ನು ಸನ್ಮಾನಿಸಿ, ಗೌರವಿಸಲಾಯಿತು. 70ಕ್ಕೂ ಅಧಿಕ ಜನರು ಶಿಬಿರದ ಪ್ರಯೋಜನ ಪಡೆದರು. ಸ್ವಾಗತ ಹಾಗೂ ಪ್ರಾಸ್ತಾವಿಕವನ್ನು ಯುವರಾಜ ಜೆ. ಗೌಡ ನೆರವೇರಿಸಿದರು.