ಹೊನ್ನಾವರ : ಸಾಲಕೋಡ ಕೊಂಡಾಕುಳಿಯಲ್ಲಿ ನಡೆದ ಗೋವಿನ ಭೀಕರ ಹತ್ಯೆ ಖಂಡಿಸಿ ಇಂದು ಸಂಜೆ 5.30ಕ್ಕೆ ಕವಲಕ್ಕಿಯಲ್ಲಿ ಪಂಜಿನ ಮೆರವಣಿಗೆ ನಡೆಯಲಿದೆ ಎಂದು ಶ್ರೀಕುಮಾರ ಸಂಸ್ಥೆಯ ಮಾಲೀಕ ವೆಂಕಟ್ರಮಣ ವಿ. ಹೆಗಡೆ (ಪುಟ್ಟು ಹೆಗಡೆ) ವಿನಂತಿ ತಿಳಿಸಿದ್ದಾರೆ.
ಸಾಲಕೋಡ ಕೊಂಡಾಕುಳಿಯಲ್ಲಿ ಗರ್ಭದ ಆಕಳ ಹೊಟ್ಟೆ ಬಗೆದು ಮಾಂಸ ಒಯ್ದಿರುವ ಘಟನೆ ಖಂಡಿಸಿ, ಶೀಘ್ರ ಅಪರಾಧಿ ಬಂದಿಸಬೇಕು ಎನ್ನುವ ಕಾರಣಕ್ಕೆ ಸ್ಥಳೀಯರು ಕವಲಕ್ಕಿಯಲ್ಲಿ ಪಂಜಿನ ಮೆರವಣಿಗೆ ಹಮ್ಮಿಕೊಂಡಿರುತ್ತಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿ ಮಾಡಿಕೊಂಡಿದ್ದಾರೆ.