ಹೊನ್ನಾವರ : ಇಂದಿನ ಯುವಕರಲ್ಲಿ ಸಕಾರಾತ್ಮಕ ಬದಲಾವಣೆ ಆಗಬೇಕೆಂದರೆ ತಂದೆ, ತಾಯಿಗಳು ಆಧ್ಯಾತ್ಮ ಚಿಂತಕರಾಗಬೇಕೆಂದು ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದ ಅಂತಾರಾಷ್ಟ್ರೀಯ ಮುಖ್ಯಾಲಯ ಮೌಂಟ್ ಅಬುವಿನಿಂದ ಆಗಮಿಸಿದ ಧಾರ್ಮಿಕ ಪ್ರಭಾಗದ ಮುಖ್ಯಾಲಯ ಸಂಯೋಜಕರಾದ ರಾಜಯೋಗಿ, ಬ್ರಹ್ಮಾಕುಮಾರ ರಾಮನಾಥ ಅಣ್ಣನವರು ಕರೆ ನೀಡಿದರು.
ಅವರು ಹೊನ್ನಾವರ ತಾಲೂಕಿನ ಗೇರುಸೊಪ್ಪಾದ ಪವಿತ್ರವನದಲ್ಲಿರುವ ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದ ಶಿವಬಾಬಾ ರಂಗಮಂದಿರದಲ್ಲಿ ನಡೆದ ಯುವಜನೋತ್ಸವ ೨೦೨೫ರ “ಶಾಂತಿಯುತ ಸಮಾಜದ ರಚನೆಯಲ್ಲಿ ಯುವಜನರ ಪಾತ್ರ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದಿನ ಯುವಶಕ್ತಿಗೆ ಆಧ್ಯಾತ್ಮಿಕ ಬಲ ತುಂಬಿದರೆ ಭಾರತಾಂಬೆಯ ರಕ್ಷಣೆ ಆಗುತ್ತದೆ ಎಂದು ಹೇಳಿದ ಅವರು ವಿದೇಶಗಳಲ್ಲಿಯೂ ಈಶ್ವರೀಯ ವಿಶ್ವ ವಿದ್ಯಾಲಯವು ಮೆಡಿಟೇಶನ್ ಕಲಿಸುತ್ತದೆ ಎಂತಲೂ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗೇರುಸಪ್ಪಾ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಕುಸುಮಕ್ಕ ಮಾತನಾಡಿ ಮೌಂಟ್ ಅಬುವಿನಿಂದ ಆಗಮಿಸಿದ್ದ ರೇಡಿಯೋ ವಿಭಾಗದ ರಾಜಯೋಗಿ ಬ್ರಹ್ಮಾಕುಮಾರ ಅಚ್ಯುತಣ್ಣನವರು ಮಾತನಾಡಿ ಯುವಕರಲ್ಲಿ ಶಾಂತಿಶಕ್ತಿ ಹೊರಹೊಮ್ಮಿದರೆ ಇಡೀ ಭಾರತವು ಶಾಂತವಾಗುತ್ತದೆ. ಆ ನಿಟ್ಟಿನಲ್ಲಿ ಈಶ್ವರೀಯ ವಿಶ್ವವಿದ್ಯಾಲಯವು ಈ ರೀತಿ ಸೇವೆ ಮಾಡುತ್ತಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ಎಸ್. ನಾಯ್ಕ, ನಗರಬಸ್ತಿಕೇರಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಮಂಜುನಾಥ ಎಮ್. ನಾಯ್ಕ, ಗೇರುಸೊಪ್ಪಾ ಕೃಷ್ಣಕೇರಿಯ ಆಂಗ್ಲಮಾಧ್ಯಮ ಶಾಲಾ ಸಮಿತಿಯ ಅಧ್ಯಕ್ಷ ಮಂಜುನಾಥ ಎನ್. ನಾಯ್ಕ, ಸಾಮಾಜಿಕ ಕಾರ್ಯಕರ್ತ ಯೋಗೇಶ ಆರ್. ರಾಯ್ಕರ್ ಉಪ್ಪೋಣಿ, ಹೊನ್ನಾವರ ಗ್ರಾಮ ಪಂಚಾಯತ ಒಕ್ಕೂಟದ ಅಧ್ಯಕ್ಷ ಗಣೇಶ ಟಿ. ನಾಯ್ಕ, ತಾಲೂಕಾ ಜನತಾ ದಳದ ಅಧ್ಯಕ್ಷ ಟಿ. ಟಿ. ನಾಯ್ಕ ಮೂಡ್ಕಣಿ, ನಗರಬಸ್ತಿಕೇರಿಯ ವ್ಯಸೇಸ ಸಂಘದ ಅಧ್ಯಕ್ಷ ಉಲ್ಲಾಸ ನಾಯ್ಕ ಕುದ್ರಗಿ, ನ್ಯಾಯವಾದಿ ಮಹೇಶ ಎಮ್. ನಾಯ್ಕ ಅಡಿಗದ್ದೆ, ಮಾಗೋಡ ಗ್ರಾಪಂ ಅಧ್ಯಕ್ಷ ಶಿವರಾಮ ಹೆಗಡೆ ಮಾಗೋಡ, ಉ.ಕ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಡಿ.ಟಿ.ನಾಯ್ಕ, ಗೇರುಸೊಪ್ಪಾ ಕೆಪಿಸಿಎಲ್ ಕನ್ನಿಕಾ ಹೊಟೇಲ್ ಮಾಲೀಕ ರಾಘವೇಂದ್ರ ಆರ್. ನಾಯ್ಕ ಉಪಸ್ಥಿತರಿದ್ದರು.
ಗೇರುಸಪ್ಪಾದ ಪ್ರ ಬ್ರ ಕು ಈಶ್ವರೀಯ ವಿಶ್ವ ವಿದ್ಯಾಲಯದ ನಿರ್ದೇಶಕ ವಿಶ್ವೇಶ್ವರ ಹಳೇಮನೆ ಅಣ್ಣನವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ ಕೆ ಚೇತನಕ್ಕ ಸ್ವಾಗತಿಸಿದರು. ಬ್ರಹ್ಮಾಕುಮಾರಿ ಮಾದೇವಕ್ಕ ಹಾಗೂ ಪುಷ್ಪಕ್ಕ ಕಾರ್ಯಕ್ರಮ ನಿರ್ವಹಿಸಿದರು. ಬ್ರಹ್ಮಾಕುಮಾರಿ ಸುನಂದಕ್ಕ ಧ್ಯಾನಾಭ್ಯಾಸ ಮಾಡಿಸಿದರು. ಬ್ರಹ್ಮಾಕುಮಾರಿ ಶಿಲ್ಪಕ್ಕ ವಂದಿಸಿದರು.