ಸಿದ್ದಾಪುರ : ಶ್ರೀ ಸಂಸ್ಥಾನ ತರಳಿಮಠದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಶಿವಲಿಂಗ ಮತ್ತು ನಂದಿ ವಿಗ್ರಹಗಳ ಮೆರವಣಿಗೆ ಪಟ್ಟಣದಿಂದ ಆರಂಭಗೊಂಡಿತು.
ಕಾರ್ತಿಕೆಯ ಪೀಠದ ಸಾರಂಗನ ಜಡ್ಡು ಕ್ಷೇತ್ರದ ಶ್ರೀಗಳಾದ ಯೋಗೇದ್ರ ಸ್ವಾಮೀಜಿಗಳು ಪುಷ್ಪ ಅರ್ಚನೆ ಮಾಡಿ ಚಾಲನೆ ನೀಡಿದರು.
ಹೊಸೂರಿನ ಜೋಗ ಸರ್ಕಲ್ನಿಂದ ಮೆರವಣಿಗೆ ಹೊರಟು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಂಚರಿಸಿತು.
ಈ ಸಂದರ್ಭದಲ್ಲಿ ತರಳಿ ಮಠದ ಅಧ್ಯಕ್ಷ ಎನ್.ಡಿ. ನಾಯ್ಕ್, ಸಮಾಜದ ಪ್ರಮುಖರಾದ ವಸಂತ ನಾಯ್ಕ್ ವಿ. ಎನ್. ನಾಯ್ಕ್, ಇಂದಿರಾ ನಾಯ್ಕ್, ಸುರೇಶ್ ನಾಯ್ಕ್, ಪ್ರಶಾಂತ್ ಹೊಸೂರ್ ಹಾಗೂ ಸಮಾಜದ ಮುಖಂಡರು, ತರಳಿ ಮಠ ಕ್ಷೇತ್ರದ ಭಕ್ತರು ಹಾಜರಿದ್ದರು.