ಗೋಕರ್ಣ: ಶಿರಸಿಯ ಮೈತ್ರೇಯಿ ನೃತ್ಯ ಕಲಾ ಟ್ರಸ್ಟ್ನ ಗೋಕರ್ಣ ಶಾಖೆಯ ದಶಮಾನೋತ್ಸವ ಕಾರ್ಯಕ್ರಮವು ಜ.25, 26ರಂದು ಗೋಕರ್ಣದ ಮುಖ್ಯ ಕಡಲತೀರದಲ್ಲಿ ನಡೆಯಲಿದೆ.
ಜ.25ರಂದು ಬೆಳಿಗ್ಗೆ 10 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಖ್ಯಾತ ಯಕ್ಷಗಾನ ಕಲಾವಿದ ಶಂಕರ ಹೆಗಡೆ ನೀಲ್ಕೋಡು ಉದ್ಘಾಟಿಸಲಿದ್ದಾರೆ. ಆನಂದಾಶ್ರಮದ ಮುಖ್ಯೋಧ್ಯಾಪಕ ಗಂಗಾಧರ ಭಟ್ ಅಧ್ಯಕ್ಷತೆವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವೇ.ಮೂ. ರಾಜಗೋಪಾಲ ಅಡಿ, ಸಸ್ಯಸಂಜೀವಿನಿ ಪಂಚಕರ್ಮ ಆಸ್ಪತ್ರೆಯ ಡಾ.ಪತಂಜಲಿ ಶರ್ಮಾ, ಗೋಕರ್ಣ ಗ್ರಾ.ಪಂ.ಅಧ್ಯಕ್ಷೆ ಸುಮನಾ ಗೌಡ, ಶಿರಸಿ ನೂಪುರ ನೃತ್ಯ ಶಾಲೆಯ ವಿ.ಅನುರಾಧಾ ಹೆಗಡೆ, ಪಿಐ ವಸಂತ್ ಆಚಾರ್ ಉಪಸ್ಥಿತರಿರಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ 5ರಿಂದ ಪ್ರಾರಂಭವಾಗಲಿದ್ದು, ಮಾರುತಿ ನಾಯ್ಕ್ ಶಿಷ್ಯವೃಂದದವರಿಂದ ಭಜನ ಸಂಗೀತ, 5:30 ರಿಂದ ಕುಮಾರಿ ಸ್ನೇಹಶ್ರೀ ಹೆಗಡೆ ಶಿರಸಿ ಇವಳಿಂದ ಭರತನಾಟ್ಯ, 6 ಗಂಟೆಯಿಂದ
ಪಿ.ಜಿ. ಪನ್ನಗ ರಾವ್, ಉಡುಪಿ ಇವರಿಂದ ಭರತನಾಟ್ಯ, 7 ರಿಂದ ಶಿರಸಿ ನೂಪುರ ನೃತ್ಯ ಶಾಲೆಯವರಿಂದ ‘ಜೀವನಾವಸ್ಥಾ’ ನೃತ್ಯ ರೂಪಕ, ರಾತ್ರಿ 8 ರಿಂದ ಮೈತ್ರೇಯಿ ನೃತ್ಯ ಕಲಾ ಟ್ರಸ್ಟ್ ಇವರಿಂದ ಬಾಲ ರಾಮಾಯಣ ನೃತ್ಯ ರೂಪಕ, ರಾತ್ರಿ 9ರಿಂದ ಸಾಗರದ ಗೀತಾಂಜಲಿ ಕಲಾಕೇಂದ್ರದಿಂದ ಗೀತಾಮೃತ ದುಹೇ ನಮಃ ವಿಶೇಷ ಕಾರ್ಯಕ್ರಮ ಜರುಗಲಿದೆ.
ಜ.26ರಂದು ಸಂಜೆ 4 ಗಂಟೆಯಿಂದ ಶಿರಸಿಯ ಭವ್ಯಾ ಭಟ್ ಇವರಿಂದ ಹಿಂದುಸ್ತಾನಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಂಜೆ 5 ರಿಂದ ಮೈತ್ರೇಯಿ ನೃತ್ಯ ಕಲಾ ಟ್ರಸ್ಟ್ ಗೋಕರ್ಣ ಶಾಖೆಯ ವಿದ್ಯಾರ್ಥಿಗಳಿಂದ ಭರತನಾಟ್ಯ, ಸಂಜೆ 6 ರಿಂದ ನಾಟ್ಯ ತರಂಗ ಟ್ರಸ್ಟ್ ಇವರಿಂದ ಹಂಸ ದಮಯಂತಿ ನೃತ್ಯ ರೂಪಕ, ಸಂಜೆ 7 ರಿಂದ ವಿ.ಪೂಜಾ ಲೋಕೇಶ್ ಇವರಿಂದ ಭರತನಾಟ್ಯ, ರಾತ್ರಿ 8.30 ರಿಂದ ‘ಮಾರುತಿ ಪ್ರತಾಪ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.