Slide
Slide
Slide
previous arrow
next arrow

ರಸ್ತೆ ಅಗಲೀಕರಣ: ಕಾಮಗಾರಿ ಮುಗಿದರೂ ಬಾರದ ಪರಿಹಾರ: ಸಂತ್ರಸ್ತರ ಆಕ್ರೋಶ

300x250 AD

ಸಿದ್ದಾಪುರ: ಪಟ್ಟಣದಲ್ಲಿ ನಡೆದ ರಸ್ತೆ ಅಗಲೀಕರಣದಲ್ಲಿ ಜಮೀನು ಕಳೆದುಕೊಂಡವರಿಗೆ ಕಾಮಗಾರಿ ನಡೆದು ವರ್ಷಗಳೇ ಕಳೆದರು ಇನ್ನೂ ಪರಿಹಾರ ದೊರೆತಿಲ್ಲ. ಕೂಡಲೇ ಸರ್ಕಾರ ಪರಿಹಾರ ನೀಡಬೇಕೆಂದು ಆಗ್ರಹಿಸಿ, ಇನ್ನು ಒಂದು ತಿಂಗಳಲ್ಲಿ ಪರಿಹಾರ ನೀಡದಿದ್ದರೆ ತಹಸೀಲ್ದಾರ ಕಚೇರಿ ಎದುರು ಪ್ರತಿಭಟನೆ ಮಾಡಲಾಗುವುದು ಎಂದು ಆಸ್ತಿ ಕಳೆದುಕೊಂಡ ಸಂತ್ರಸ್ತರು ಆಗ್ರಹಿಸಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಪಂ ಸದಸ್ಯ ಹಾಗೂ ಸಂತ್ರಸ್ಥ ಮಾರುತಿ ಟಿ.ನಾಯ್ಕ ಹೊಸೂರು ಹಾಗೂ ಇತರರು ಸಿದ್ದಾಪುರ ಪಪಂ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆ ರಾಜ್ಯ ಹೆದ್ದಾರಿಯನ್ನು ಚತುಷ್ಪಥ ರಸ್ತೆಯನ್ನಾಗಿ ಮಾಡುವುದಕ್ಕಾಗಿ ಸಾಕಷ್ಟು ಜನ ಮನೆ, ಅಂಗಡಿ, ಕಾಂಪೌಂಡ್, ಬಾವಿ, ಶೌಚಾಲಯ, ತೆಂಗಿನ ಮರಗಳು ಹಾಗೂ ಇತರೆ ಬೆಲೆಬಾಳುವ ಮರಗಳನ್ನು ಕಳೆದುಕೊಂಡಿದ್ದೇವೆ. ಆಸ್ತಿಯ ದಾಖಲೆ ಹೊಂದಿರುವ 62ಕುಟುಂಬಗಳು ಜಮೀನುಗಳನ್ನು ಕಳೆದುಕೊಂಡಿದ್ದು ಅದರ ಬಾಬ್ತು 2ಕೋಟಿ 75ಲಕ್ಷ ರೂ. ಪರಿಹಾರ ಬರಬೇಕಿದೆ. ಸರ್ಕಾರದ ಮಟ್ಟದಲ್ಲಿ ಏನು ಪರಿಹಾರ ಘೋಷಣೆ ಆಗಬೇಕಿತ್ತು ಅದರ ನಿಯಮಾವಳಿಯಂತೆ ಲೊಕೋಪಯೋಗಿ, ಎಸಿ, ಡಿಸಿ ಅವರು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಟ್ಟಿದ್ದಾರೆ. ಈಗ ನಾವು ಜಾಗ ಬಿಟ್ಟು ಕೊಟ್ಟು ಮೂರು ವರ್ಷ ಆಗಿದೆ. ಡಿಸಿ ಅವರು ನಮ್ಮ ಜಾಗದ ಹಣ ಎಷ್ಟು ಎಂಬುದರ ಬಗ್ಗೆ ಅಪ್ರುವಲ್ ಕೂಡ ಮಾಡಿದ್ದಾರೆ .
ಈಗ ಸರ್ಕಾರದ ಮಟ್ಟದಲ್ಲಿ ಮಂಜೂರಿ ಆಗುವುದು ಬಾಕಿ ಇದೆ. ಸಾಕಷ್ಟು ಬಾರಿ ಜಾಗವನ್ನು ಕಳೆದುಕೊಂಡ ಸಂತ್ರಸ್ತರು ಶಾಸಕ ಭೀಮಣ್ಣ ನಾಯ್ಕ ಅವರ ಗಮನಕ್ಕೆ ತಂದಿದ್ದಾರೆ. ಅವರು ಪ್ರಯತ್ನ ಮಾಡುತ್ತೇವೆ ಆಗುತ್ತದೆ ಎಂದು ಹೇಳುತ್ತಾ ಬಂದಿದ್ದಾರೆ. ಆದರೆ ಪರಿಹಾರದ ಹಣ ನಮಗೆ ಇನ್ನೂವರೆಗೂ ಮಂಜೂರಿ ಆಗಿಲ್ಲ. ಹಾಗಾಗಿ ಶಾಸಕರು ಆದಷ್ಟು ಬೇಗ ನಮಗೆ ಪರಿಹಾರವನ್ನು ಒದಗಿಸಿಕೊಡಬೇಕು ಎಂದು ಆಗ್ರಹಿಸಿ ಇನ್ನು ಒಂದು ತಿಂಗಳಲ್ಲಿ ಪರಿಹಾರ ನೀಡದಿದ್ದರೆ ತಹಸೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇವೆ. ಸಂತ್ರಸ್ತರಲ್ಲಿ ಎಲ್ಲರೂ ಬಡವರಿದ್ದೇವೆ. ಎಲ್ಲರದ್ದು ಗುಂಟೆ, ಆಣೆ ಲೆಕ್ಕದಲ್ಲಿ ಜಮೀನು ಇದೆ ಎಂದು ಹೇಳಿದರು.

300x250 AD

ಸಾಮಾಜಿಕ ಕಾರ್ಯಕರ್ತ ಅಣ್ಣಪ್ಪ ನಾಯ್ಕ ಮಾತನಾಡಿ ರಸ್ತೆ ಅಗಲೀಕರಣಕ್ಕಾಗಿ ಸರ್ಕಾರದಿಂದ ನೋಟಿಸ್ ಬಂದ ತಕ್ಷಣ ಅದಕ್ಕೆ ಸ್ಪಂದಿಸಿ ಇಲ್ಲಿಯ ಜನತೆ ತಮ್ಮ ಜಮೀನನ್ನು ಬಿಟ್ಟುಕೊಟ್ಟಿದ್ದಾರೆ. ಆದರೆ ಸರ್ಕಾರ ಪರಿಹಾರ ನೀಡದೇ ಇರುವುದು ಮಾತ್ರಶೋಚನೀಯವಾಗಿದೆ. ಕೂಡಲೇ ಜಮೀನು ಬಿಟ್ಟುಕೊಟ್ಟವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಮೈಕೋ ರೋಡ್ರಿಗೀಸ್, ರಿಜ್ವಾನ್ ಶೇಖ್, ವಿನಾಯಕ ತಿಮ್ಮಪ್ಪ ಬಿ, ಚಂದ್ರಕಾಂತ ಪೈ, ರಾಮು ಪೈ, ನೇತ್ರಾವತಿ ಬಾಂದಿ, ಲಲಿತಾ ಅಂಬಿಗ, ದಿವ್ಯ ರೋಡ್ರಿಗೀಸ್, ಜ್ಯೂಲಿ, ಶಿವಕುಮಾರ ಪುಟ್ಟಯ್ಯ ಪೂಜಾರಿ, ಮನೋಹರ, ಜೈರಾಮ ಈರಾ ನಾಯ್ಕ, ಸಂತೋಷ ಪೈ, ಮಂಜುನಾಥ ಆರ್.ಭಟ್ಟ ಇತರರಿದ್ದರು.

Share This
300x250 AD
300x250 AD
300x250 AD
Back to top