ಸಿದ್ದಾಪುರ: ನಿವೃತ್ತ ಮುಖ್ಯಶಿಕ್ಷಕಿ ಲಕ್ಷ್ಮಿ ಗೋವಿಂದ ನಾಯ್ಕ ಎಂಟು ವರ್ಷಕ್ಕಿಂತ ಹೆಚ್ಚು ಸಮಯ ವಂದಾನೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದು, ಅವರ ಅವಧಿಯಲ್ಲಿ ಶಾಲೆ ಪ್ರಗತಿಯನ್ನು ಹೆಚ್ಚು ಸಾಧಿಸಿದೆ. ಶಾಲೆಯ ಶೈಕ್ಷಣಿಕ ಗುಣಮಟ್ಟ, ಮಕ್ಕಳ ಹಾಜರಾತಿ ಸುಧಾರಣೆ ಹಾಗೂ ಸಂಪನ್ಮೂಲ ಕ್ರೋಢೀಕರಣ ಮತ್ತು ಪಾಲಕರ ಒಗ್ಗೂಡಿಸುವಿಕೆ ಇವೆಲ್ಲ ಅಂಶಗಳು ಉತ್ತಮವಾಗಿ ಮೂಡಿ ಬಂದಿವೆ. ತನ್ನ ವೃತ್ತಿಯನ್ನು ನಿಷ್ಠೆಯಿಂದ ನಿರ್ವಹಿಸಿ ವೃತ್ತಿ ಧರ್ಮವನ್ನು ಉತ್ತಮವಾಗಿ ಪಾಲಿಸಿಕೊಂಡು ವೃತ್ತಿಯನ್ನು ಪ್ರೀತಿಸಿ ಶಿಕ್ಷಕ ವೃತ್ತಿಗೆ ಹೆಚ್ಚು ಘನತೆಯನ್ನು ತಂದುಕೊಟ್ಟಿರುತ್ತಾರೆ. ಅವರನ್ನು ಗೌರವಿಸಿ ಸನ್ಮಾನಿಸುವುದು ಸಮಾಜದ ಸಭ್ಯ ಸಂಸ್ಕೃತಿಯ ಪ್ರತೀಕ ಎಂದು ರಾಷ್ಟçಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ಜಿ.ಜಿ. ಹೆಗಡೆ ಬಾಳಗೋಡ ಅವರು ಹೇಳಿದರು.
ಲಕ್ಷ್ಮಿ ಜಿ. ನಾಯ್ಕ ಅವರು ಇತ್ತೀಚೆಗೆ ನಿವೃತ್ತಿ ಹೊಂದಿದ್ದು, ಹೊಸೂರಿನ ಅವರ ಸ್ವಗೃಹದಲ್ಲಿ ಸನ್ಮಾನಿಸಿ ಮಾತನಾಡಿದರು. ಬೇಡ್ಕಣಿ ಜನತಾವಿದ್ಯಾಲಯದ ಹಿರಿಯ ಶಿಕ್ಷಕ ಜಿ.ಟಿ. ಭಟ್ ಹಾಗೂ ನಿವೃತ್ತ ಪ್ರೌಢಶಾಲಾ ಶಿಕ್ಷಕ ಎಸ್.ಬಿ. ನಾಯ್ಕ ಮತ್ತು ನಿವೃತ್ತ ಮುಖ್ಯಶಿಕ್ಷಕಿ ಸ್ವರ್ಣಲತಾ ಶಾನಭಾಗ, ಸುರೇಶ ನಾಯ್ಕ ಅವರು ಉಪಸ್ಥಿತರಿದ್ದರು.
ಜಿ.ಟಿ. ಭಟ್ ಅವರು ಸ್ವಾಗತಿಸಿದರು. ಎಸ್.ಬಿ. ನಾಯ್ಕ ಅವರು ವಂದಿಸಿದರು.