ಯಲ್ಲಾಪುರ: ತಾಲೂಕಿನ ಮಲವಳ್ಳಿಯ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಜಾತ್ರಾ ಮಹೋತ್ಸವ ಸಂಭ್ರಮದಿಂದ ನಡೆಯುತ್ತಿದೆ.
ಬುಧವಾರ ರಾತ್ರಿ ದೇವಸ್ಥಾನದ ಆವಾರದಲ್ಲಿ ರಥೋತ್ಸವ ನಡೆಯಿತು. ಸುತ್ತಮುತ್ತಲಿನ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ, ರಾಮಲಿಂಗೇಶ್ವರ ದೇವರಿಗೆ ಜಯಘೋಷ ಹಾಕಿದರು. ಚಂಡೆವಾದನದ ಅಬ್ಬರಕ್ಕೆ ಭಕ್ತರು ಕುಣಿದು ಕುಪ್ಪಳಿಸಿದರು.