Slide
Slide
Slide
previous arrow
next arrow

ನಮ್ಮಲ್ಲಿರುವ ಶಿಸ್ತು ನಮಗೆ ಶ್ರೀ ರಕ್ಷೆ: ಎಸಿ ಕಾವ್ಯಾರಾಣಿ

300x250 AD

ಶಿರಸಿ: ಭಾರತ ಸೇವಾದಳ ಜಿಲ್ಲಾ ಕಛೇರಿಯಲ್ಲಿ ನಡೆದ ಸಹಾಯಕ ಯೋಗ ನೈತಿಕ ದೈಹಿಕ ಶಿಕ್ಷಣ ತರಬೇತಿ ಶಿಬಿರದಲ್ಲಿ ಸಹಾಯಕ ಆಯುಕ್ತೆ ಕಾವ್ಯಾರಾಣಿ ಕೆ. ವಿ. ಇವರಿಗೆ ಗೌರವ ವಂದನೆ ಸಲ್ಲಿಸಲಾಯಿತು.

ಸಹಾಯಕ ಆಯುಕ್ತೆ ಕಾವ್ಯಾರಾಣಿ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡುತ್ತ ಸೇವಾದಳ ಶಿಕ್ಷಣ ನಮ್ಮ ಹೆಮ್ಮೆ, ನಮ್ಮಲ್ಲಿರುವ ಶಿಸ್ತು ನಮಗೆ ಶ್ರೀರಕ್ಷೆ, ಮೌಲ್ಯ ದೇಶಭಕ್ತಿ, ತ್ಯಾಗ, ಸೇವೆ ಗುರು ಹಿರಿಯರಲ್ಲಿ ಗೌರವ ಇತ್ಯಾದಿಗುಣಗಳನ್ನು ನಿಮ್ಮ ಮಕ್ಕಳಲ್ಲಿ ಸಮರ್ಥವಾಗಿ ತಲುಪಿಸುತ್ತೀರಿ ಎಂಬ ವಿಶ್ವಾಸ ನನಗಿದೆ. ನನಗೂ ಕೂಡಾ ನಿಮ್ಮಂತೆ ಸಮವಸ್ತ್ರವನ್ನು ಧರಿಸಿ ಚಟುವಟಿಕೆ ಮಾಡುವ ಬಯಕೆ ನನಗಿದೆ. ನನ್ನನ್ನು ಇಲ್ಲಿ ಕರೆಸಿ ಗೌರವಿಸಿದ್ಧಕ್ಕೆ ಧನ್ಯವಾದಗಳು ಎಂದರು.

ವೇದಿಕೆಯಲ್ಲಿದ್ದ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ದತ್ತಾತ್ರೇಯ ನಾಯ್ಕ ಮಾತನಾಡುತ್ತ ಆಪತ್ ಕಾಲದಲ್ಲಿ ಸೇವಾದಳದ ಸಹಯೋಗಕ್ಕೆ ನಾವು ಗೌರವಿಸಲೇಬೇಕು, ಸೇವಾದಳವನ್ನು ನಾವು ಬೆಳೆಸಿಕೊಂಡು ಹೋಗೋಣ ಎಂದು ಹಾರೈಸಿದರು. ಅಂತರ್‌ರಾಷ್ಟ್ರೀಯ ಕ್ರೀಡಾಪಟು ಪಿ.ಎನ್. ಜೋಗಳೇಕರ್, ತಾಲೂಕು ಸಮಿತಿ ಸದಸ್ಯ ಕೆ.ಎನ್. ನಾಯ್ಕ್ ಉಪಸ್ಥಿತರಿದ್ದರು. ಭಾರತ ಸೇವಾದಳ ಜಿಲ್ಲಾಧ್ಯಕ್ಷ ವಿ.ಎಸ್. ನಾಯಕ ಅಧ್ಯಕೀಯ ಭಾಷಣದಲ್ಲಿ ಮಾತನಾಡುತ್ತ ಪೂಜ್ಯ ಮಹಾತ್ಮರ ತತ್ವ ಆದರ್ಶವನ್ನು ನಮ್ಮ ಮುಂದಿನ ಪೀಳಿಗೆಗೆ ಹಂಚೋಣ ತಾವೆಲ್ಲಾ ಅದಕ್ಕೆ ಸಂಪೂರ್ಣ ಸಹಕಾರ ನೀಡಿ ಎಂದು ಆಶಿಸಿದರು. ತಾಲೂಕು ಸಮಿತಿ ಅಧ್ಯಕ್ಷ ಅಶೋಕ ಭಜಂತ್ರಿ ಸರ್ವರನ್ನು ಸ್ವಾಗತಿಸಿದರು. ಜಿಲ್ಲಾ ಸಂಘಟಕ ರಾಮಚಂದ್ರ ಹೆಗಡೆ ಗೌರವ ರಕ್ಷಣೆ ನೀಡಿ ವರದಿ ವಾಚಿಸಿದರು. ತಾಲೂಕು ಸಮಿತಿ ಸಹ ಕಾರ್ಯದರ್ಶಿ ಎಮ್.ಎನ್.ಹೆಗಡೆ ನಿರೂಪಿಸಿದರು. ತಾಲೂಕು ಸಮಿತಿ ಕೋಶಾಧ್ಯಕ್ಷ ಕುಮಾರ ನಾಯ್ಕ ವಂದಿಸಿದರು. ಜಿಲ್ಲಾ ಸಮಿತಿ ಸದಸ್ಯ ಸುಧಾಮ ಪೈ, ಶಾಖಾ ನಾಯಕರಾದ ಉದಯ ಕುಮಾರ್ ಹೆಗಡೆ, ಶ್ರೀಮತಿ ದಾಕ್ಷಾಯಿಣಿ ಕೊಡಿಯಾ ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದರು. ೫೮ ಶಿಬಿರಾರ್ಥಿಗಳು ತರಬೇತಿ ಪಡೆದುಕೊಂಡರು.

300x250 AD

ಜಿಲ್ಲಾ ಅಧ್ಯಕ್ಷ ವಿ. ಎಸ್. ನಾಯಕ ಅಧ್ಯಕ್ಷತೆ ವಹಿಸಿದ್ದರು. ಸರ್ವಧರ್ಮ ಪ್ರಾರ್ಥನೆ ಮಾಡಿ ಶಿಬಿರಾರ್ಥಿಗಳು ಪ್ರದರ್ಶನ ಕವಾಯತು ಸಾಭಿನಯ ಪ್ರದರ್ಶನ ನೀಡಿದರು. ಶಿಬಿರಾರ್ಥಿಗಳಾದ ವಿಷ್ಣುಕುಮಾರ ನಾಯ್ಕ ಮತ್ತು ಶ್ರೀಮತಿ ಸುಷ್ಮಾ ಡಿ. ನಾಯ್ಕ ತಮ್ಮ ಅನುಭವ ಹಂಚಿಕೊಡರು. ಸಹಾಯಕ ಆಯುಕ್ತರಿಗೆ ಹಾಗೂ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿಗಳಿಗೆ ಗೌರವಿಸಲಾಯಿತು.

ಭಾರತ ಸೇವಾದಳ ಸಹಾಯಕ ಶಿಕ್ಷಣ ತರಬೇತಿ ಶಿಬಿರದಲ್ಲಿ ಪ್ರತಿದಿನ ಧ್ವಜವಂದನೆ ನೆರವೇರಿಸಿದವರು ರಾಯಪ್ಪ ಹುಲೇಕಲ್ ಶಾಲೆ ಮುಖ್ಯ ಶಿಕ್ಷಕಿ ಶ್ರೀಮತಿ ಮುಕ್ತಾ ಭಜಂತ್ರಿ, ಕ್ಷೇತ್ರ ಸಮನ್ವಯಾಧಿಕಾರಿಗಳಾದ ದಿನೇಶ್ ಶೇಟ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ವಿ.ಗಣೇಶ ನೆರವೇರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಉಪನ್ಯಾಸ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಪ್ರೊ.ಕೆ‌ಎನ್ ಹೊಸಮನಿ ಜೀವನ ಮೌಲ್ಯಗಳು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಗೌರಿ ನಾಯ್ಕ ಆರೋಗ್ಯ ಶಿಕ್ಷಣ, ಜಿಲ್ಲಾ ಸಂಘಟಕ ರಾಮಚಂದ್ರ ಹೆಗಡೆ ರಾಷ್ಟ್ರಧ್ವಜ ಮಾಹಿತಿ, ಭಾರತ ಸೇವಾದಳ ಮಾಹಿತಿ, ಹರ್ಡಿಕರ ಜೀವನ ಚರಿತ್ರೆ, ನಾಯಕತ್ವದ ಗುಣಗಳನ್ನು ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಉದಯ ಕುಮಾರ್ ಹೆಗಡೆ ಯೋಗ ಶಿಕ್ಷಣ, ಸುಧಾಮ ಪೈ ಪ್ರಾಣಾಯಾಮ ಧ್ಯಾನ ವಿಷಯಗಳನ್ನು ತಿಳಿಸಿದ್ದಾರೆ. ಪ್ರತಿದಿನ ಪ್ರಾರ್ಥನೆ, ಯೋಗ ಚಿಂತನೆ, ಸಾಮೂಹಿಕ ವ್ಯಾಯಾಮ. ಪ್ರದರ್ಶನ ಕವಾಯತು. ಸಾಭಿನಯ, ಲೇಝೀಮ, ಡೆಂಬಲ್ಸ, ಹೂಪ್ಸ್ ನಿಶಾನೆ. ಪದಕವಾಯಿತು ಗಳನ್ನು ಶಿಬಿರದಲ್ಲಿ ಕಲಿಸಲಾಯಿತು. ಧ್ವಜದಡಿಯಲ್ಲಿ ಸ್ವಯಂ ಸೇವಕ ಪ್ರತಿಜ್ಞೆ ಮಾಡಿ ಧ್ವಜ ಅವರೋಹಣ ಮಾಡುವುದರೊಂದಿಗೆ ಶಿಬಿರ ಸಂಪನ್ನ ಗೊಂಡಿತು.

Share This
300x250 AD
300x250 AD
300x250 AD
Back to top