ಶಿರಸಿ: ಅರಣ್ಯವಾಸಿಗಳಿಂದ ಆರೋಪಿಸಿದ ದೌರ್ಜನ್ಯ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಲಾಗುವದು. ಅಲ್ಲದೇ, ಅರಣ್ಯವಾಸಿಗಳಿಂದ ಹೊಸ ಅರಣ್ಯ ಭೂಮಿ ಅತಿಕ್ರಮಣಕ್ಕೆ ನಿಯಂತ್ರಿಸಲಾಗುವುದೆಂದು ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಹೇಳಿದರು.
ಅವರು ಜ.9ರಂದು ಶಿರಸಿಯ ಗಾಣಿಗ ಕಲ್ಯಾಣ ಮಂಟಪದಲ್ಲಿ ಅರಣ್ಯ ಅಧಿಕಾರಿಯೊಂದಿಗೆ ಅರಣ್ಯವಾಸಿಗಳ ಸ್ಪಂದನಾ ಕಾರ್ಯಕ್ರಮದಲ್ಲಿ ಮೇಲಿನಂತೆ ಹೇಳಿದರು.
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳ ಜಿಪಿಎಸ್ ಮಂಜೂರಿ ಪ್ರಕ್ರಿಯೆಯಾಗಿದ್ದು, ಜಿಪಿಎಸ್ ಮಾನದಂಡದ ಅಡಿಯಲ್ಲಿಯೇ ಅರಣ್ಯವಾಸಿಗಳನ್ನ ಒಕ್ಕಲೇಬ್ಬಿಸುವ ಪ್ರಕ್ರಿಯೆ ಜರುಗಿಸಲಾಗದು. ಅರಣ್ಯ ಸಿಬ್ಬಂದಿಗಳಿಂದ ಕರ್ತವ್ಯ ಚ್ಯುತಿ ಪ್ರಕರಣಗಳನ್ನು ಗಮನಕ್ಕೆ ತಂದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವದು, ಎಪ್ರೀಲ್ ೨೭,೧೯೭೮ ಪೂರ್ವದ ಜಿಲ್ಲೆಯಲ್ಲಿನ ೨೪೪೯ ಪ್ರಕರಣಗಳಲ್ಲಿ ೧೯೦೦ ರಷ್ಟು ಹೆಕ್ಟರ ಪ್ರದೇಶ ಅರಣ್ಯೇತರ ಚಟುವಟಿಕೆಗೆ ಬಿಡುಗಡೆ ಮಾಡಲು ಪ್ರಕ್ರಿಯೆ ಜರುಗುತ್ತಿದೆ. ಅರಣ್ಯ ಸಿಬ್ಬಂದಿಗಳ ಕಾನೂನುಭಾಹಿರ ನಡತೆ ಮತ್ತು ಕೃತ್ಯ ಗಂಭೀರವಾಗಿ ಪರಿಗಣಿಸಲಾಗುವದು ಎಂದು ಅರಣ್ಯವಾಸಿಗಳ ಸಮಸ್ಯೆಗಳ ಪ್ರಶ್ನೆಗಳ ಸುರಿಮಳೆಗೆ ಉತ್ತರಿಸಿದರು.
ಅರಣ್ಯ ಸಿಬ್ಬಂಧಿಗಳಿಗೆ ಎಚ್ಚರಿಕೆ:
ಅರಣ್ಯ ಕಾಯಿದೆಗೆೆ ವ್ಯತಿರಿಕ್ತವಾಗಿ ಅರಣ್ಯ ಸಿಬ್ಬಂದಿಗಳು ಅರಣ್ಯವಾಸಿಗಳ ಮೇಲೆ ದೌರ್ಜನ್ಯ, ಕಿರುಕುಳ ಮತ್ತು ಮಾನಸಿಕ ಹಿಂಸೆ ಪ್ರಕರಣಗಳು ಮರುಕಳಿಸಿದ್ದಲ್ಲಿ ಅರಣ್ಯವಾಸಿಗಳಿಂದ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವದೆಂದು ಅರಣ್ಯ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದರು. ಅರಣ್ಯವಾಸಿಗಳು ಎರಡನೇ ದರ್ಜೆಯ ಪ್ರಜೆಗಳಲ್ಲ, ಅವರೊಂದಿಗೆ ಗೌರವಯುತವಾಗಿ ವರ್ತಿಸುವಂತೆ ಅರಣ್ಯ ಸಿಬ್ಬಂದಿಗೆ ಸೂಚನೆ ನೀಡಬೇಕೇಂದು ಸಭೆಯಲ್ಲಿ ಅಧ್ಯಕ್ಷ ರವೀಂದ್ರ ನಾಯ್ಕ ಮೇಲಿನ ಅಧಿಕಾರಿಗಳಿಗೆ ಕೋರಿದರು.
ಸಭೆಯಲ್ಲಿ ಡಿಎಫ್ಓ ಅಜ್ಜಯ್ಯ, ಡಿವೈಎಸ್ಪಿ ಗಣೇಶ ಕೆ.ಎಲ್. ಎಸಿಎಫ್ ಎಸ್.ಎಸ್.ನಿಂಗಾಣಿ, ಎಸಿಎಫ್ ಹರೀಶ ಜಾನ್ಮನೆ, ಎಸಿಎಫ ಲೋಕೇಶ ಹೊನ್ನಾವರ, ಸಿಪಿಐ ಸೀತರಾಮ, ಆರ್ಎಫ್ಓ ಶಿವಾನಂದ ನಿಂಗಾಣಿ, ಪಿಎಸ್ಐ ರತ್ನಾ ಉಪಸ್ಥಿತರಿದ್ದರು.
ಹೋರಾಟಗಾರರ ವೇದಿಕೆ ಪರವಾಗಿ ವಿವಿಧ ತಾಲೂಕಿನ ಅಧ್ಯಕ್ಷರಾದ ರಮಾನಂದ ನಾಯ್ಕ ಅಚವೆ ಅಂಕೋಲಾ, ಜಿಲ್ಲಾ ಸಂಚಾಲಕರಾದ ಇಬ್ರಾಹಿಂ ಗೌಡಳ್ಳಿ, ಮಂಜುನಾಥ ಮರಾಠಿ ಕುಮಟ, ಭೀಮಶಿ ವಾಲ್ಮಿಕೀ ಯಲ್ಲಾಪುರ, ಶಿವಾನಂದ ಜೋಗಿ ಮುಂಡಗೋಡ, ಮಹೇಶ ನಾಯ್ಕ ಸಾಲ್ಕೋಡ, ಕಿರಣ ಮರಾಠಿ, ನೆಹರು ನಾಯ್ಕ, ಶಂಕರ ಕೊಡಿಯಾ ಉಪಸ್ಥಿತರಿದ್ದರು.
ಮುಕ್ತ ಚರ್ಚೆಗೆ ತೀವ್ರ ಆಕ್ರೋಶ:
ಅರಣ್ಯ ಅಧಿಕಾರಿಗಳು ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಮುಕ್ತ ಚರ್ಚೆಗೆ ಅವಕಾಶ ನಿರಾಕರಿಸಿದಾಗ, ಅರಣ್ಯವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ ಎಲ್ಲಾ ಅರಣ್ಯವಾಸಿಗಳ ಕ್ಷಮ-ಕ್ಷಮ ಮುಕ್ತವಾಗಿ ಚರ್ಚಿಸಬೇಕು ಮತ್ತು ಅರಣ್ಯವಾಸಿಗಳ ಸಮಸ್ಯೆಗಳಿಗೆ ಸೂಕ್ತ ಉತ್ತರಿಸಬೇಕೆಂದು ಒಂದು ತಾಸಿಗೂ ಮಿಕ್ಕಿ ಅರಣ್ಯವಾಸಿಗಳು ಬಿಗಿಪಟ್ಟು ಹಿಡಿದ ಹಿನ್ನಲೆಯಲ್ಲಿ ಸಹಸ್ರಾರು ಅರಣ್ಯವಾಸಿಗಳ ಸಮೂಕದಲ್ಲಿ ಗಾನಿಗ ಸಭಾ ಕಲ್ಯಾಣ ಮಂಟದಲ್ಲಿ ಸಭೆ ಜರುಗಿಸಿರುವುದು ವಿಶೇಷವಾಗಿತ್ತು.