Slide
Slide
Slide
previous arrow
next arrow

ಗಣೇಶ ಶೇಟ್‌ಗೆ ಬಿ.ಎಚ್. ಶ್ರೀಧರ ಶಿಕ್ಷಣ ಪ್ರಶಸ್ತಿ

300x250 AD

ಶಿರಸಿ: ಶಿಕ್ಷಣ ತಜ್ಞ, ಸಾಹಿತಿ, ಪ್ರೋ.ಬಿ.ಎಚ್. ಶ್ರೀಧರರ ಹೆಸರಿನಲ್ಲಿ ಸ್ಥಾಪಿತವಾಗಿರುವ ಈ ಬಾರಿಯ ‘ಬಿ.ಎಚ್. ಶ್ರೀಧರ ಶಿಕ್ಷಣ ಪ್ರಶಸ್ತಿ’ಗೆ ಗಣೇಶ ಜೆ. ಶೇಟ್ ಇವರನ್ನು ಆಯ್ಕೆ ಮಾಡಲಾಗಿದೆ. ಗಣೇಶ ಜೆ. ಶೇಟ್ ಎಂ.ಜಿ.ಸಿ. ಕಾಲೇಜು ಸಿದ್ದಾಪುರದ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದಾರೆ. ಗಣೇಶ ಶೇಟ್, ಜಗದೀಶ ಶೇಟ್, ಹಾಗೂ ಶೀಲಾ ಇವರ ಪುತ್ರ. ಪ್ರಶಸ್ತಿಯು 2 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿದೆ. ಬಿ.ಎಚ್. ಶ್ರೀಧರರು ಸಿದ್ದಾಪುರ, ಎಂ.ಜಿ.ಸಿ. ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಥಮ ಪ್ರಾಚಾರ್ಯರಾಗಿ 1969 ರಿಂದ 1976 ರ ವರೆಗೆ ಸೇವೆ ಸಲ್ಲಿಸಿದ್ದಾರೆ. ಅವರ ಸ್ಮರಣಾರ್ಥ ಪ್ರತಿವರ್ಷ ಈ ಕಾಲೇಜಿನ ಬಿ.ಎ. ಅಂತಿಮ ಪರೀಕ್ಷೆಯಲ್ಲಿ ಪ್ರಥಮರಾದ ವಿದ್ಯಾರ್ಥಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ಬಿ.ಎಚ್. ಶ್ರೀಧರ ಪ್ರಶಸ್ತಿ ಸಮಿತಿಯ ಕಾರ್ಯಾಧ್ಯಕ್ಷ ರಾಜಶೇಖರ ಹೆಬ್ಬಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top