ಶಿರಸಿ: ಅಸಮರ್ಪಕ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳ ಪುನರ್ ಪರಿಶೀಲನಾ ವಿಚಾರಣೆಗೆ ರಾಜ್ಯಾದಂತ ಕಾನೂನಾತ್ಮಕ ಆಕ್ಷೇಪ ಬಂದಿರುವ ಹಿನ್ನಲೆಯಲ್ಲಿ, ಪುನರ್ ಪರಿಶೀಲನಾ ಪ್ರಕ್ರಿಯೆ ಸ್ಥಗಿತಕ್ಕೆ ಹಿರಿಯ ಸಚಿವರಾದ ಸತೀಶ ಮುಖ್ಯ ಮಂತ್ರಿಗಳಿಗೆ ಪತ್ರ ಬರೆಯುವೆ ಎಂದು ಕರ್ನಾಟಕ ಸರ್ಕಾರದ ಹಿರಿಯ ಸಚಿವ ಜಾರಕಿಹೊಳಿ ತಿಳಿಸಿದರೆಂದು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಅವರು ಜ.೮ರಂದು ಸಚಿವರ ಗೃಹ ಕಛೇರಿಯಲ್ಲಿ ಭೇಟಿಯಾಗಿ ಪುನರ್ ಪರಿಶೀಲನಾ ಪ್ರಕ್ರಿಯೆಯಲ್ಲಿ ಕಾನೂನಾತ್ಮಕ ತೊಡಕುಗಳನ್ನ ವಿವರಿಸಿದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಗಮನಕ್ಕೆ ತಂದು ಪ್ರಕ್ರಿಯೆ ನಿಯಂತ್ರಿಸಲಾಗುವುದೆಂದು ಅವರು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ರಾಜ್ಯ ಅರಣ್ಯ ಭೂಮಿ ಹಕ್ಕು ಮೇಲ್ಚಿಚಾರಣಾ ಸಮಿತಿಯ ಅಪೂರ್ಣ ಸಮಿತಿ ತೆಗೆದುಕೊಂಡ ನಿರ್ಣಯ ಕಾಯಿದೆ ವಿರುದ್ಧವಾಗಿದ್ದು ಮತ್ತು ಮೂರು ತಲೆಮಾರಿನ ವಯಕ್ತಿಕ ದಾಖಲೆಗೆ ಅರಣ್ಯ ಹಕ್ಕು ಸಮಿತಿಯು ನೋಟೀಸ್ ನೀಡುತ್ತಿರುವುದು ಕಾನೂನಿಗೆ ವ್ಯತಿರಿಕ್ತವಾದ ಕ್ರಮವೆಂದು ಚರ್ಚೆಯ ಸಂದರ್ಭದಲ್ಲಿ ಕಾನೂನಾತ್ಮಕ ಅಂಶಗಳ ಪ್ರಸ್ತುತ್ತ ಪಡಿಸಿದ ಹಿನ್ನಲೆಯಲ್ಲಿ ಮೇಲಿನ ನಿರ್ಧಾರವನ್ನು ಪ್ರಕಟಿಸಿದರೆಂದು ಅವರು ತಿಳಿಸಿದರು.
ಉಚ್ಚ ನ್ಯಾಯಾಲಯದ ನ್ಯಾಯಾವಾದಿ ಮತ್ತು ಹಿರಿಯ ಸಾಮಾಜಿಕ ದುರಿಣ ಕಾನೂನಾತ್ಮಕ ಅಂಶವನ್ನು ವಿಶ್ಲೇಷಿಸಿದರು.
ಅರಣ್ಯವಾಸಿಗಳ ಪರ:
ಅರಣ್ಯ ಹಕ್ಕು ಕಾಯಿದೆ ಅನುಷ್ಠಾನದಲ್ಲಿ ರಾಜ್ಯ ಸರ್ಕಾರವು ಅರಣ್ಯವಾಸಿಗಳ ಪರವಾಗಿದ್ದು ಮಂಜೂರಿ ಪ್ರಕಿಯೆಯಲ್ಲಿ ಅರಣ್ಯವಾಸಿಗಳ ಪರವಾಗಿ ಸರ್ಕಾರವು ನಿಲುವು ವ್ಯಕ್ತಪಡಿಸಲಾಗುವದೆಂದು ಸಚಿವ ಜಾರಕಿಹೊಳಿಯವರು ತಿಳಿಸಿದ್ದಾರೆಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.