ಶಿರಸಿ: ಕಳೆದ ಒಂದೂವರೆ ಎರಡು ವರ್ಷಗಳಿಂದ ಮರಾಠಿಕೊಪ್ಪದ ಮುಖ್ಯ ರಸ್ತೆ ಯಲ್ಲಾಪುರನಾಕಾ ವರೆಗೆ ರಸ್ತೆ ಹೊಂಡಮಯವಾಗಿದ್ದು, ಅಲ್ಲಲ್ಲಿ ಡಾಂಬರೀಕರಣ ಕಿತ್ತು ಬಿದ್ದಿದ್ದು ಪಾದಚಾರಿಗಳಿಂದ ಹಿಡಿದು ವಾಹನ ಓಡಾಡುವುದು ದುಸ್ತರವಾಗಿದೆ. ಎರಡೆರಡು ಭಾರಿ ಗುದ್ದಲಿ ಪೂಜೆಯಾದರೂ ಡಾಂಬರಿಕರಣಕ್ಕೆ ಯೋಗ ಕೂಡಿಬಂದಿಲ್ಲ, ಕಳೆದ ಒಂದೂವರೇ ತಿಂಗಳಿಂದ ನೀರು ಸರಬರಾಜಿನ ಪೈಪ್ ಲೈನ್ ಜೋಡಣೆ ಕಾರ್ಯ ಆರಂಭ ಆಗಿದ್ದರು ಇನ್ನು ಮುಗಿದಿಲ್ಲ. ಮರಾಠಿಕೊಪ್ಪದ ಭಾಗದಲ್ಲಿ ನಲ್ಲಿ ನೀರು ಸರಿಯಾಗಿ ಬರುತ್ತಿಲ್ಲ. ಇಡೀ ಮರಾಠಿಕೊಪ್ಪವನ್ನು ಪೈಪ್ ಜೋಡಣೆ ಹೆಸರಲ್ಲಿ ರಸ್ತೆಯನ್ನು ಅಗೆಯಲಾಗಿದೆ. ಇದನ್ನು ಖಂಡಿಸಿ ಮರಾಠಿಕೊಪ್ಪದ ಸಾರ್ವಜನಿಕರು ನಗರಸಭೆಗೆ ತೆರಳಿ ಅಧಿಕಾರಿಗಳ ಜೊತೆಗೆ ಮಾತನಾಡಿ ಇನ್ನು 20 ದಿನದ ಒಳಗಾಗಿ ಪೈಪ್ ಲೈನ್ ಕಾರ್ಯ ಮುಗಿಸಿ ಡಾಂಬರಿಕರಣ ಶುರುವಾಗಬೇಕೆಂದು ಆಗ್ರಹಿಸಿದರು.
ಈ ವೇಳೆ ನಂದನ್ ಸಾಗರ್ ಮಾತನಾಡಿ 20 ದಿನದೊಳಗೆ ಕೆಲಸ ಆರಂಭವಾಗದಿದ್ದರೆ ಮರಾಠಿಕೊಪ್ಪದ ಸಾರ್ವಜನಿಕರನ್ನು ಸೇರಿಸಿ ನಗರಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ಪ್ರಮುಖರಾದ ಆನಂದ್ ಸಾಲೇರ್, ಅಶೋಕ್ ಶೆಟ್ಟಿ, ಕೃಷ್ಣಾ ನಾಯ್ಕ್, ಮಂಜುನಾಥ್ ಶೇಟ್, ಉಪೇಂದ್ರ ಮೆಸ್ತಾ, ಹನುಮಂತ್, ರವಿ ಶೆಟ್ಟಿ, ನಾಗೇಶ್ ನಾಯ್ಕ್, ದೀಪ ತಲ್ವಾರ್, ವೆಂಕ್ಟೇಶ ನಾಯ್ಕ್, ಹಾಗೂ ಆ ಭಾಗದ ನಾಗರಿಕರು ಮತ್ತು ಆಟೋ ಚಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.