ಶಿರಸಿ: ಅರಣ್ಯ ಹಕ್ಕು ಕಾಯಿದೆ ಅರ್ಜಿಯ ಪುನರ್ ಪರಿಶೀಲನಾ ದೋಷಯುಕ್ತ ಪ್ರಕ್ರಿಯೆ ಸರ್ಕಾರ ಸರಿಪಡಿಸದ್ದಿದ್ದಲ್ಲಿ ಕಾನೂನುಬಾಹಿರ ಪ್ರಕ್ರಿಯೆ ವಿರುದ್ಧ ಉಚ್ಛನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿ ದಾಖಲಿಸುವಂತೆ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಸಲಹೆ ನೀಡಿದ್ದಾರೆಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜ.೭ರಂದು ಬೆಂಗಳೂರಿನಲ್ಲಿ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅವರೊಂದಿಗೆ ಇತ್ತೀಚಿನ ಅರಣ್ಯವಾಸಿಗಳ ಅರ್ಜಿ ಪುನರ್ ಪರಿಶೀಲನೆಯ ಸಂದರ್ಭದಲ್ಲಿ ಉಂಟಾಗಿರುವ ಕಾನೂನು ಸಮಸ್ಯೆಗಳ ಕುರಿತು ಅವರೊಂದಿಗೆ ಚರ್ಚಿಸಿದ ಸಂದರ್ಭದಲ್ಲಿ ಅವರು ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂದು ಪ್ರಕಣೆಯಲ್ಲಿ ತಿಳಿಸಿದ್ದಾರೆ.
ಅರಣ್ಯ ಹಕ್ಕು ಕಾಯಿದೆ ಅರಣ್ಯವಾಸಿ ಪರವಾಗಿದ್ದು ಕಾನೂನಿಗೆ ವ್ಯತಿರಿಕ್ತವಾಗಿ ಮತ್ತು ಕಾನೂನಿನ ವಿಧಿವಿಧಾನ ಅನುಸರಿಸದೇ ಮಂಜೂರಿ ಪ್ರಕ್ರಿಯೆ ಜರುಗುತ್ತಿದ್ದು ಪೂರ್ಣ ಪ್ರಮಾಣದ ಅಸ್ತಿತ್ವದ ಹಾಗೂ ಅರಣ್ಯವಾಸಿಯ ವ್ಯಯಕ್ತಿಕ ಮೂರು ತಲೆಮಾರಿನ ಅಂದರೆ ೧೯೩೦ ರ ಸಾಗುವಳಿ ದಾಖಲೆ ಕೇಳುವ ವಿಧಾನವನ್ನ ವಿಶ್ರಾಂತ ನ್ಯಾಯಮೂರ್ತಿಗಳ ಅವರ ಗಮನಕ್ಕೆ ತರಲಾಯಿತೆಂದು ಅವರು ಹೇಳಿದರು.
ಸರ್ಕಾರ ಸ್ಪಂದನೆ ಅವಶ್ಯ:
ಕಾನೂನು ಭಾಹಿರವಾಗಿ ಅರಣ್ಯವಾಸಿಗಳ ಹಿತಾಶಕ್ತಿ ಮತ್ತು ಕಾನೂನಿಗೆ ವ್ಯತಿರಿಕ್ತವಾಗಿ ಪುನರ್ ಪರಿಶೀಲನಾ ಅರ್ಜಿಯ ಪ್ರಕ್ರಿಯೆ ಜರುಗುತ್ತಿರುವದಕ್ಕೆ ಸರ್ಕಾರ ಹೆಚ್ಚಿನ ಗಮನಕ್ಕೆ ಹರಿಸಬೇಕೇಂದು ಎಂದು ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಈ ಸಂಧರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.