ಯಲ್ಲಾಪುರ: ನಗರದ ಖಾಸಗೀ ಶಾಲೆಗಳಿಗೆ ಪೈಪೋಟಿ ನೀಡುವ ಮಟ್ಟದಲ್ಲಿ ಗ್ರಾಮೀಣ ಭಾಗದ ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದು ವಿಧಾನಸಭಾ ಪರಿಷತ್ ಸ್ಪೀಕರ್ ಬಸವರಾಜ ಹೊರಟ್ಟಿ ಹೇಳಿದರು.
ಅವರು ಸೋಮವಾರ ಸಂಜೆ ತಾಲೂಕಿನ ಕಣ್ಣಿಗೇರಿ ಗ್ರಾಪಂ ವ್ಯಾಪ್ತಿಯ ಕೊಡಸೆ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದ ಮಕ್ಕಳ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಹಳ್ಳಿಯ ಮಕ್ಕಳಲ್ಲಿಯೂ ಪ್ರತಿಭೆ ಬುದ್ದಿವಂತಿಕೆ ಇದ್ದು, ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು. ಶಾಲೆಯ ಅಭಿವೃದ್ದಿ ಕಾಣಬೇಕಾದರೆ ದಾನಿಗಳ ಪಾಲಕರ ಸಹಕಾರ ಅಗತ್ಯ. ಶಾಲೆಯ ಬಿಸಿ ಊಟ ಕೊಠಡಿ ನಿರ್ಮಾಣದ ಸಲುವಾಗಿ ಸದ್ಯ 5 ಲಕ್ಷ ನೀಡುವುದಾಗಿ ಭರವಸೆ ನೀಡಿದರು.
ಬಿಇಒ ಎನ್.ಆರ್. ಹೆಗಡೆ, ದೈಹಿಕ ಪರಿವೀಕ್ಷಕ ಪ್ರಕಾಶ ತಾರಿಕೊಪ್ಪ, ಸಿಆರ್‌ಪಿ ಶ್ರೀನಿವಾಸ ನಾಯಕ, ಎಸ್.ಡಿ.ಎಮ್.ಸಿ. ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ, ಪ್ರಮುಖರಾದ ವೆಂಕಟ್ರಮಣ ಭಾಗ್ವತ ,ರವಿ ಕೈಟಕರ, ವಿಶ್ವೇಶ್ವರ ಹೆಗಡೆ,ಕೃಷ್ಣ ಭಟ್ಟ ಅಗ್ಗಾಶಿಮನೆ, ಮುಖ್ಯ ಶಿಕ್ಷಕಿ ಇಂದಿರಾ ಎನ್.ಎಚ್. ಭಾಗವಹಿಸಿದ್ದರು.