ಬನವಾಸಿ: ಇಲ್ಲಿಯ ಶ್ರೀ ತತ್ವಮಸಿ ಅಯ್ಯಪ್ಪ ಸೇವಾ ಸನ್ನಿಧಿಯ ವಾರ್ಷಿಕ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆಯು ಮಂಗಳವಾರದಂದು ವಿಜೃಂಭಣೆಯಿಂದ ಜರುಗಿತು.
ಮುಂಜಾನೆ ಅಯ್ಯಪ್ಪ ಸ್ವಾಮಿಯ ಭಾವಚಿತ್ರಕ್ಕೆ ವಿವಿಧ ಬಗೆಯ ಹೂವುಗಳಿಂದ ವಿಷೇಶ ಅಲಂಕಾರ ಮಾಡಲಾಯಿತು. ನಂತರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಮೂರ್ತಿಗೆ ತುಪ್ಪ, ಹಾಲು, ಜೇನುತುಪ್ಪ, ಗೋಡಂಬಿ, ದ್ರಾಕ್ಷಿ, ಕಲ್ಲು ಸಕ್ಕರೆ ಹಾಗೂ ವಿವಿಧ ಬಗೆಯ ಹಣ್ಣುಗಳಿಂದ ಅಭಿಷೇಕಗೈದು, ಮಾಲಾಧಾರಿ ಸ್ವಾಮಿಗಳು ಭಜನೆ ಹಾಡಿ ಸಂಭ್ರಮಿಸಿದರು. ತತ್ವಮಸಿ ಅಯ್ಯಪ್ಪ ಸೇವಾ ಸನ್ನಿಧಿಯ ಪರಶುರಾಮ ಗುರುಸ್ವಾಮಿಯವರು ಮಹಾಪೂಜೆ, ಮಹಾ ಮಂಗಳಾರತಿ ನೆರವೇರಿಸಿದರು. ಸಾವಿರಾರು ಭಕ್ತರು ಹಣ್ಣುಕಾಯಿ ಸಮರ್ಪಿಸಿ ಭಕ್ತಿ ಮೆರೆದರು. ನಂತರದಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ಜರುಗಿತು.
ಪೂಜಾ ಕಾರ್ಯಕ್ರಮದಲ್ಲಿ ಗುರುಸ್ವಾಮಿಗಳಾದ ಶಿವರಾಜ ಆಚಾರ್ಯ, ಗುರುನಾಥ ಮೇಸ್ತ್ರಿ, ಸಚೀನ್ ಸಾಲಿ, ಮಾಲಾಧಾರಿಗಳಾದ ಪಾಪಣ್ಣ, ಮಾರುತಿ, ತೇಜಸ್, ಚಂದ್ರು, ಪ್ರಕಾಶ ಮತ್ತುಗುಣಿ, ಮಾಲತೇಶ, ಅಶೋಕ ಕಡಗೋಡ, ಮಂಜು ಕುರುಬರ, ರಾಘವೇಂದ್ರ, ದರ್ಶನ್ ಪಿಳ್ಳೈ ಹಾಗೂ ಸಾವಿರಾರು ಭಕ್ತರು ಇದ್ದರು.