ಯಲ್ಲಾಪುರ: ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಭಗವದ್ಗೀತಾ ಅಭಿಯಾನ ಹಿರಿಯರಿಂದ ಹಿಡಿದು ಮಕ್ಕಳವರೆಗೂ ಪರಿಣಾಮಕಾರಿಯಾಗಿ ತಲುಪುತ್ತಿದೆ. ಇದಕ್ಕೆ ನಿದರ್ಶನವೆಂಬಂತೆ ಯಲ್ಲಾಪುರದ ಗಣೇಶ ಜಡ್ಡಿಪಾಲ ಅವರ ಪುತ್ರಿ, ಪುಟ್ಟ ಬಾಲಕಿ ಶ್ರಾವಣಿ ಭಗವದ್ಗೀತೆಯ ಶ್ಲೋಕಗಳನ್ನು ಹೇಳುವ ವಿಡಿಯೊ ಎಲ್ಲೆಡೆ ವೈರಲ್ ಆಗುತ್ತಿದೆ.
ತುಳಸಿಯ ಮಾಲೆ ಮಾಡುತ್ತಿರುವ ಮನೆಯ ಹಿರಿಯರಿಗೆ, ತುಳಸಿ ದಳಗಳನ್ನು ಎತ್ತಿ ಕೊಡುತ್ತ, ಭಗವದ್ಗೀತೆಯ 9ನೇ ಅಧ್ಯಾಯವನ್ನು ಮುದ್ದಾಗಿ ಹಿರಿಯರಿಗೆ ಹೇಳಿಕೊಡುವ ಶ್ರಾವಣಿ, ಎಲ್ಲರ ಪ್ರಶಂಸೆಗೆ ಪಾತ್ರಳಾಗಿದ್ದಾಳೆ.