ಸಿದ್ದಾಪುರ: ತಾಲೂಕಿನ ಮುಗದೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘವನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು. ಮುಗದೂರಿನ ಸ.ಹಿ.ಪ್ರಾ.ಶಾಲೆಯ ಮುಖ್ಯಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಟಿ.ಬಿ ಪಟಗಾರ ಸಂಘವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳು ಶಿಕ್ಷಣದ ಜೊತೆಗೆ ಸಂಸ್ಕಾರವಂತರಾಗಿ ಬದುಕಬೇಕು. ಪಾಲಕರು,ಮಕ್ಕಳು ಶಿಕ್ಷಕರನ್ನು ಯಾವಾಗಲೂ ಗೌರವ ಭಾವನೆಯಲ್ಲಿ ಕಾಣಬೇಕು ಎಂದರು. ಮಕ್ಕಳ ಗುಣಮಟ್ಟದ ಕಲಿಕೆಗೆ ಸಿದ್ಧಗೊಂಡಿರುವ ಸ್ಮಾರ್ಟ್ ಕ್ಲಾಸನ್ನು ವಕೀಲ ಆರ್. ಎಸ್. ಹೆಗಡೆ ಮುಗದೂರು ಉದ್ಘಾಟಿಸಿ ಇಂದಿನ ತಾಂತ್ರಿಕ ಯುಗದಲ್ಲಿ ಸ್ಮಾರ್ಟ್ ಕ್ಲಾಸಿನ ಅನಿವಾರ್ಯತೆ ಯನ್ನು ಸವಿಸ್ತಾರವಾಗಿ ತಿಳಿಸಿ ಹಳೆ ವಿದ್ಯಾರ್ಥಿ ಸಂಘದ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು. ಉಗಮ ಎಂಬ ಶೀರ್ಷಿಕೆಯ ಅಡಿಯಲ್ಲಿ ಮಕ್ಕಳಿಂದ ಸಿದ್ಧವಾದ ಕ್ರಿಯಾತ್ಮಕ ಮತ್ತು ಶಾಲಾ ಸಮಗ್ರ ವರದಿಯನ್ನು ಒಳಗೊಂಡ ಹಸ್ತಪತ್ರಿಕೆಯನ್ನು ಬೆಂಗಳೂರಿನ ರಾಜಧಾನಿ ಕಾಲೇಜಿನ ಪ್ರಾಂಶುಪಾಲ ಸ್ವಾಮಿ ಎಂ.. ಎಂ ಬಿಡುಗಡೆಗೊಳಿಸಿ ಮಕ್ಕಳ ರಜನಾತ್ಮಕತೆ ಮತ್ತು ಗುರುಗಳ ಮಾರ್ಗದರ್ಶನವನ್ನು ಶಾಘ್ಲಿಸಿದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜು ಪಿ. ಮಡಿವಾಳ ಮಾತನಾಡಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಸದಾ ನಮ್ಮ ಸಂಘ ಸ್ಪಂದಿಸುತ್ತದೆ ಎಂದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ಚಂದ್ರು ಗೌಡರ್, ಖಜಾನೆ ಇಲಾಖೆಯ ಎಸ್. ಬಿ. ನಾಯ್ಕ ಸಿರಸಿ ಅತಿಥಿಗಳಾಗಿ ಆಗಮಿಸಿದ್ದರು ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಮಾರುತಿ ನಾಯ್ಕ, ಪರಶುರಾಮ್ ಕೆ. ನಾಯ್ಕ, ಮಹಾಬಲೇಶ್ವರ ಮಡಿವಾಳ, ಎಸ್. ಖ. ಎಮ್. ಸಿ. ಅಧ್ಯಕ್ಷ ವಸಂತ್ ಬಿ. ಮಡಿವಾಳ ಹಾಗೂ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿ ಸಂಘದಿಂದ ಶಾಲೆಗೆ ಒಂದು ಲಕ್ಷ ಇಪ್ಪತ್ತು ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಬಣ್ಣ ಹಾಗೂ ಸ್ಮಾರ್ಟ್ ಕ್ಲಾಸ್ ಸಿದ್ಧಪಡಿಸಿರುವುದು ವಿಶೇಷವಾಗಿತ್ತು.
ಮುಖ್ಯ ಶಿಕ್ಷಕಿಂ ಶ್ರೀಮತಿ ಮಂಗಲಾ ನಾಯ್ಕ ಸ್ವಾಗತಿಸಿದರು . ರಾಮಚಂದ್ರ ನಾಯ್ಕ ಹಾಗೂ ದೇವರಾಜ್ ಎಂ. ಇವರು ನಿರೂಪಿಸಿದರು. ಎಂ.ಬಿ. ದಯಾನಂದ ವಂದಿಸಿದರು.