ಹೊನ್ನಾವರ: ಶ್ರೀ ವಿಶ್ವವೀರಾಂಜನೇಯ ಧಾರ್ಮಿಕ ಹಾಗೂ ದತ್ತಿ ಸಂಸ್ಥೆ ಶ್ರೀ ಕ್ಷೇತ್ರ ಬಂಗಾರಮಕ್ಕಿ ಗೇರುಸೊಪ್ಪ ವತಿಯಿಂದ ಮಾ.31ರಿಂದ ಎಪ್ರಿಲ್ 13 ರವರೆಗೆ ಪ್ರತಿಷ್ಠಾ ಮಹೋತ್ಸವ ಹಾಗೂ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಶ್ರೀ ಮಾರುತಿ ಗೂರುಜಿ ಹೇಳಿದರು.
ಪಟ್ಟಣದ ದತ್ತ ಮಂದಿರದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು ಮಾರ್ಚ್ 31 ರಂದು ಧಾರ್ಮಿಕ ಕಾರ್ಯಕ್ರಮಗಳ ಪ್ರಾರಂಭವಾಗಲಿದೆ. ಏಪ್ರಿಲ್ 3 ರಂದು ಶ್ರೀ ವಿರಾಂಜನೇಯ ದೇವರ ಪ್ರತಿಷ್ಠೆ,ಸ್ವರ್ಣಕಲಶ ಪ್ರತಿಷ್ಠೆ, ಶ್ರೀ ಮಹಾಗಣಪತಿ ಪ್ರತಿಷ್ಠೆ, ನಾಗಬನದಲ್ಲಿ ಶ್ರೀ ಸುಬ್ರಹ್ಮಣ್ಯ ಪ್ರತಿಷ್ಠೆ,ಶ್ರೀ ಚೌಡೇಶ್ವರಿ ಪ್ರತಿಷ್ಠೆ, ನವಗ್ರಹ ಪ್ರತಿಷ್ಠೆ, ಏಪ್ರಿಲ್ 4 ರಂದು ಪುಷ್ಪರಥೋತ್ಸವ,ಎಪ್ರಿಲ್ 5 ರಂದು ಬ್ರಹ್ಮರಥೋತ್ಸವ, 6 ರಂದು ಶ್ರೀರಾಮ ನವಮಿ, 7, 8, 9 ರಂದು ಶರಾವತಿ ಆರತಿ, ಶರಾವತಿ ಕುಂಭ, ಎಪ್ರಿಲ್ 11 ರಂದು ಪುಷ್ಪ ರಥೋತ್ಸವ, ಏಪ್ರಿಲ್ 12ರಂದು ಹನುಮ ಜಯಂತಿ ಹಾಗೂ ಮಹಾಸ್ಯಂದನ ಬ್ರಹ್ಮ ರಥೋತ್ಸವ ನಡೆಯಲಿದೆ ಎಂದರು.
ಸಂಸ್ಕ್ರತಿ ಕುಂಭ ಮಲೆನಾಡ ಉತ್ಸವ 2025 ಹಾಗೂ ಶ್ರೀ ಗೂರೂಜಿಯವರ ಪೀಠಾರೋಹಣದ ರಜತಮಹೋತ್ಸವ ನಡೆಯುವ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಸ್ಪಂದನ ಸಂಸ್ಥೆಯ ಅಧ್ಯಕ್ಷ ಗಣಪತಿ ಹೆಗಡೆ, ರಾಮಕೃಷ್ಣ ಹೆಗಡೆ ಉಪಸ್ಥಿತರಿದ್ದರು.