ದಾಂಡೇಲಿ : ಸಾಹಿತಿ, ನಿವೃತ್ತ ಶಿಕ್ಷಕರು ಹಾಗೂ ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ನಗರದ ಸಮೀಪದ ಮೌಳಂಗಿಯ ನಿವಾಸಿ ಡಾ.ಅಜನಾಳ ಭೀಮಾಶಂಕರ ಅವರಿಗೆ ಬಳ್ಳಾರಿ ಜಿಲ್ಲೆಯ ಕಡಲಬಾಳು ಗ್ರಾಮದಲ್ಲಿ ಬಹುಮುಖ ಸೇವಾರತ್ನ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಡಾ.ಅಜನಾಳ ಭೀಮಾಶಂಕರ ಇವರ ರಂಗಕಲೆ ಹಾಗೂ ಸಾಹಿತ್ಯದಲ್ಲಿನ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.