ಅಂಕೋಲಾ: ತಾಲೂಕಿನ ಬೆಳೆಸೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಸಕ್ತ ಸಾಲಿನ ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಶುಕ್ರವಾರ ಜರುಗಿತು.
ಬೆಳಸೆ ಗ್ರಾಮ ಪಂಚಾಯತ ಅಧ್ಯಕ್ಷೆ ಶೋಭಾ ಬೀರಣ್ಣ ನಾಯಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಪಂಚಾಯತದಲ್ಲಿ ಸಿಗುವ ಸೌಲಭ್ಯಗಳಾದ ರಸ್ತೆ, ದಾರಿದೀಪ, ಕುಡಿಯುವ ನೀರು ಇನ್ನಿತರ ಸೌಲಭ್ಯಗಳನ್ನು ಒದಗಿಸಲಾಗುವುದು. ಈ ಶಾಲೆಯಲ್ಲಿ ಉತ್ತಮ ಬೋಧಕ ಸಿಬ್ಬಂದಿಗಳಿದ್ದು ಎಸ್.ಎಸ್.ಎಲ್.ಸಿ. ಫಲಿತಾಂಶ ಉತ್ತಮವಾಗಿದ್ದು ಎಂದರು.
ಪಿ.ಎಂ. ಪದವಿ ಪೂರ್ವ ಕಾಲೇಜು ಉಪನ್ಯಾಸ ಉಲ್ಲಾಸ ಹುದ್ದಾರ ಮಾತನಾಡಿ, ವಿದ್ಯಾರ್ಥಿಗಳಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅದನ್ನೇ ಪಾಲಕರು ಪ್ರೋತ್ಸಾಹಿಸಿ ಸಾಧನೆ ಮಾಡಲು ಪ್ರೇರೇಪಿಸಬೇಕು ಎಂದರು.
ಶೆಟಗೇರಿ ಗ್ರಾಮ ಪಂಚಾಯತ ಅಧ್ಯಕ್ಷ ಲಕ್ಷ್ಮಿಧರ ನಾಯಕ ಮಾತನಾಡಿ, ಶಾಲೆಯಲ್ಲಿ ಉತ್ತಮ ಶೈಕ್ಷಣಿಕ ವಾತಾವರಣವಿದ್ದು, ಶಾಲೆಗೆ ಅತ್ಯವಶ್ಯವಿರುವ ರಸ್ತೆ ನಿರ್ಮಾಣ ಮತ್ತು ಬೋರ್ ವೆಲ್ ನಿರ್ಮಾಣಕ್ಕೆ ತಮ್ಮ ಪಂಚಾಯತದಿಂದ ನೆರವು ನೀಡುವುದಾಗಿ ತಿಳಿಸಿದರು.
ಸಾಮಾಜಿಕ ಕಾರ್ಯಕರ್ತ ಚೇತನ್ ನಾಯಕ , ಶೆಟಗೇರಿ ಗ್ರಾಮ ಪಂಚಾಯತನ ಪಂಚಾಯತ ಅಭಿವೃದ್ಧಿ ಅಧಿಕಾರಿ ಗಿರೀಶ ನಾಯಕ , ಶಾಲೆಯ ಪ್ರಾಂಶುಪಾಲ ಅಶೋಕ ದೇವು ಗಾಂವಕರ್ ಉಪಸ್ಥಿತರಿದ್ದರು.
ಈ ವೇದಿಕೆಯಲ್ಲಿ ಕಳೆದ ಸಾಲಿನ ಎಸ್.ಎಸ್.ಎಲ್.ಸಿ.ಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಶೈಕ್ಷಣಿಕ, ಕ್ರೀಡೆ ಹಾಗೂ ಸಹಪಠ್ಯ ವಿಭಾಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು. ವಸತಿ ಶಾಲೆಯ ಆಧಾರ ಸ್ಥಂಭಗಳಾದ ಬೋಧಕೇತರ ಸಿಬ್ಬಂದಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.
ಪೋಷಕ ಪ್ರತಿನಿಧಿಗಳಾದ ಸಂದೀಪ ನಾಯ್ಕ, ಮೋತಿರಾಮ ರಾಠೋಡ, ಶರಾವತಿ ಹರಿಕಂತ್ರ, ವಿದ್ಯಾರ್ಥಿ ಪ್ರತಿನಿಧಿಗಳಾದ ಕುಮಾರಿ ಸ್ಪೂರ್ತಿ ಈರಣ್ಣನವರ ಮತ್ತು ಅನುಷಾ ನಾಯ್ಕ ಶಾಲೆಯ ಸಿಬ್ಬಂದಿ ಶ್ರೀಗುರುಭಕ್ತ ನಾಯ್ಕ, ಸಿಂಧು ಹೆಗಡೆ, ವಿನುತಾ ನಾಯ್ಕ, ಕುಮಾರಿ ಸುಷ್ಮಾ ದೇಶ ಭಂಡಾರಿ, ಕುಮಾರಿ ನಾಗಶ್ರೀ ನಾಯ್ಕ ಹಾಗೂ ಇನ್ನಿತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.
ಶಿಕ್ಷಕರಾದ ವೆಂಕಟೇಶ ಗೌಡ ನಿರೂಪಿಸಿದರು. ಶಿವರಾಮ ಭಾಗ್ವತ ಸ್ವಾಗತಿಸಿದರು. ಸವಿತಾ ಪಾವಸ್ಕರ ರವರು ವರದಿ ವಾಚನ ಮಾಡಿದರು. ಲಕ್ಷö್ಮಣ ಗೌಡ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರ ಯಾದಿಯನ್ನು ಓದಿದರು. ಶ್ಯಾಮಲಾ ಕಾಣಕೋಣಕರ ವಂದಿಸಿದರು.